ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

ಕಲಬುರಗಿಯಲ್ಲಿ ಉದ್ಯೋಗ ಮೇಳ| Job fair in Kalaburagi Aug 2026

August 14, 2026 9:50 PM
---Advertisement---

ಕಲಬುರಗಿ ಆ.14 :ಆಗಷ್ಟ17 ರಂದು ಕಲಬುರಗಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. (Job fair in Kalaburagi Aug 2026) ಆಸಕ್ತರು ಭಾಗವಹಿಸಿ ಲಾಭ ಪಡೆದುಕೊಳ್ಳಲು ಕೋರಲಾಗಿದೆ.

Job fair in Kalaburagi Aug 2026| ಸ್ಥಳ ಎಲ್ಲಿ ?

ಕಲಬುರಗಿ (ಪುರುಷ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2026ರ ಆಗಸ್ಟ್ 17 ರಂದು ಬೆಳಿಗ್ಗೆ 9 ಗಂಟೆಗೆ ಶಿಶಿಕ್ಷು ಹಾಗೂ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ (ಪುರುಷ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

15 ಉದ್ದಿಮೆಗಳು ಭಾಗಿ

ಈ ಶಿಶಿಕ್ಷು ಹಾಗೂ ಉದ್ಯೋಗ ಮೇಳದಲ್ಲಿ ಕಲಬುರಗಿ ಮತ್ತು ಬೆಂಗಳೂಳೂರಿನಿಂದ ಸುಮಾರು 15 ಕ್ಕೂ ಹೆಚ್ಚು ಉದ್ಯಮೇದಾರರು ಹಾಗೂ ವಿವಿಧ ಬೃಹತ್ ಮತ್ತು ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಭಾಗವಹಿಸಲಿದ್ದಾರೆ.

ದಾಖಲಾತಿಗಳೊಂದಿಗೆ ಬನ್ನಿ

ಇಚ್ಚೆಯುಳ್ಳ ಅಭ್ಯರ್ಥಿಗಳು ಮೇಲ್ಕಂಡ ದಿನದಂದು ನಡೆಯುವ ಶಿಶಿಕ್ಷು ಹಾಗೂ ಉದ್ಯೋಗ ಮೇಳಕ್ಕೆ ತಮ್ಮ ಬಯೋಡೆಟಾ, ಎಸ್.ಎಸ್.ಎಲ್.ಸಿ ಮತ್ತು ಐಟಿಐ ಅಂಕಪಟ್ಟಿ, ಎರಡು ಭಾವಚಿತ್ರ, ಆಧಾರ ಕಾರ್ಡ್ ಹಾಗೂ ಇತರೆ ಮೂಲ ದಾಖಲಾತಿ ಹಾಗೂ ಪ್ರತಿಗಳೊಂದಿಗೆ ಕಲಬುರಗಿ ಎಂ.ಎಸ್.ಕೆ.ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಯಲ್ಲ್ಲಿ ಹಾಜರಾಗಬೇಕು.

ಆಸಕ್ತರು ಈ ನಂಬರಗೆ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸೂಚನಾ ಫಲಕವನ್ನು ಹಾಗೂ ಸಂಸ್ಥೆಯ ದೂರವಾಣಿ ಸಂಖ್ಯೆ: 9844778565, 9481539511 ಮತ್ತು 9740524743 ಗೆ ಸಂಪರ್ಕಿಸಲು ಕೋರಲಾಗಿದೆ.

WhatsApp

Join Now

Telegram

Join Now

Leave a Comment