ಕಲಬುರಗಿ ಆ.13 : ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಕರೆಗೆ ಕಲಬುರಗಿಯಲ್ಲಿ ಕಿಂಚಿತ್ತೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.. Kalaburagi No bandh ಎನ್ನುವಂತೆ ಜನ ಜೀವನ ಸಹಜವಾಗಿದೆ.
Kalaburagi No bandh
ಹೌದು ! ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ನ್ಯಾಯಾಲಯದ ಆದೇಶ ಖಂಡಿಸಿ ಕನ್ನಡ ವಾಟಾಳ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.
ಆದರೆ ಈ ಬಂದ್ ಗೆ ಕಲಬುರಗಿಯಲ್ಲಿ ಕಿಂಚಿತ್ತೂ ಸಪೋರ್ಟ್ ಕಂಡು ಬಂದಿಲ್ಲ. ಕಲಬುರಗಿ ನೋ ಬಂದ್ ಎನ್ನುವಂತಿತ್ತು. ಜನ ಜೀವನ ಬೆಳಂ ಬೆಳಿಗ್ಗೆಯಿಂದಲೂ ಸಹಜ ಸ್ಥಿತಿಯಲ್ಲಿಯೇ ಮುಂದುವರೆಯಿತು.
ಆಟೋ ,ಬಸ್ ಎಲ್ಲಾ ಸಹಜ
ಬಸ್ ಸಂಚಾರ, ಆಟೋ ಸೇರಿ ಖಾಸಗಿ ವಾಹನಗಳ ಸಂಚಾರ, ಲಾಡ್ಜಗಳು, ಹೋಟೆಲ್ ಗಳು, ಕಿರಾಣಾ ಅಂಗಡಿಗಳು, ಶಾಲಾ ಕಾಲೇಜುಗಳು ಸೇರಿ ಎಲ್ಲಾ ವ್ಯಾಪಾರ ವ್ಯವಹಾರ ಎಂದಿನಂತೆ ಅತ್ಯಂತ ಸುಗಮವಾಗಿ ನಡೆಯುತ್ತಿದೆ.
Read this also : 5 ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಶಿಕ್ಷಕನಿಗೆ 25 ವರ್ಷ ಜೈಲು ಶಿಕ್ಷೆ | School teacher sentenced to 25 years jail in POCSO case
ಪ್ರತಿಭಟನೆಯೂ ಇಲ್ಲ
ಕರ್ನಾಟಕ ಬಂದ್ ಗೆ ಕಲಬುರಗಿಯಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ ಎನ್ನುವುದು ಒಂದಡೆಯಾದರೆ , ಕಲಬುರಗಿಯಲ್ಲಿಂದು ಕನ್ನಡ ಪರ ಸಂಘಟನೆಗಳೂ ಸೇರಿದಂತೆ ಯಾವುದೇ ಸಂಘಟನೆಗಳಿಂದ ಸಣ್ಣ ಪ್ರತಿಭಟನೆ ಸಹ ನಡೆಯಲಿಲ್ಲ ಎನ್ನುವುದು ಗಮನಾರ್ಹ.
ಬಂದ್ ಬಗ್ಗೆ ಜನರಿಗೆ ಗೊತ್ತೇ ಇಲ್ಲ
ಕನ್ನಡ ಪರ ಹೋರಾಟಗಾರ ವಾಟಾಳ ನಾಗರಾಜ್ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಆದ್ರೆ ಕಲಬುರಗಿ ಭಾಗದಲ್ಲಿ ಈ ಬಂದ್ ಕರೆ ಬಗ್ಗೆ ಯಾವುದೇ ಜಾಗೃತಿಯೇ ಇಲ್ಲ. ಬಂದ್ ಇದೆಯಾ ? ಯಾಕೆ ಬಂದ್ ? ಯಾರಿಂದ




