ಕಲಬುರಗಿ: ಜು.22: 2026 – 27ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಕ್ರಿಶ್ಚಿಯನ್ ಸಮುದಾಯದ ಅರ್ಹ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ‘ಅರಿವು’ ಹಾಗೂ ‘ವಿದೇಶಿ ವಿದ್ಯಾಭ್ಯಾಸ ಸಾಲ’ ಯೋಜನೆಗಳಡಿ ನಿಗಮದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ (appplication invitation for scholarship 2026) ಎಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
appplication invitation for scholarship 2026
ಈ ಹಿಂದೆ ಕೇವಲ CET, NEET ಹಾಗೂ JEE ಪರೀಕ್ಷೆಗಳಿಗೆ ಸೀಮಿತವಾಗಿದ್ದ ಈ ಯೋಜನೆಯನ್ನು ಈಗ PGCET, CLAT, ICAR ಪರೀಕ್ಷೆಗಳು ಸೇರಿದಂತೆ NAAC ‘A’ ಗ್ರೇಡ್ ಅಥವಾ NIRF ಅಗ್ರ 100 ಶ್ರೇಯಾಂಕದ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ.
ಕರ್ನಾಟಕದ ಖಾಯಂ ನಿವಾಸಿಯಾಗಿರುವ, ಕುಟುಂಬದ ವಾರ್ಷಿಕ ಆದಾಯ ₹8.00 ಲಕ್ಷ ಮೀರಿರದ ಮತ್ತು ಹಿಂದಿನ ವರ್ಷದಲ್ಲಿ ಕನಿಷ್ಠ ಶೇ. 60 ಅಂಕ ಪಡೆದಿರುವ ವಿದ್ಯಾರ್ಥಿಗಳು ‘ಅರಿವು’ ಯೋಜನೆಗೆ ಅರ್ಹರಾಗಿರುತ್ತಾರೆ.
20 ಲಕ್ಷದವರೆಗೆ ಸಾಲ
ವೃತ್ತಿಪರ ಕೋರ್ಸ್‌ಗಳು, ITI, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಹಾಗೂ ಪಿಎಚ್ ಡಿ ವ್ಯಾಸಂಗಕ್ಕೆ ಪ್ರತಿ ವರ್ಷಕ್ಕೆ ಗರಿಷ್ಠ ₹5.00 ಲಕ್ಷದಂತೆ ಒಟ್ಟು ₹20.00 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ.
ಇನ್ನು ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆಯಡಿ ಜಾಗತಿಕವಾಗಿ ಟಾಪ್ 500 ಶ್ರೇಯಾಂಕದಲ್ಲಿರುವ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆಸ್ತಿ ಅಡಮಾನದ ಮೇಲೆ ₹20.00 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು.
ಇದನ್ನು ಓದಿ: ಅನ್ನ – ನೀರಿಲ್ಲದೇ, ಗಾಳಿ – ಬೆಳಕಿಲ್ಲದೇ ಕಡಣಿಯಲ್ಲಿ ಕಠಿಣ ಅನುಷ್ಠಾನ
ಶೇ.2 ರಷ್ಟು ಸೇವಾ ಶುಲ್ಕ ಕಡಿತ
ವ್ಯಾಸಂಗ ಪೂರ್ಣಗೊಂಡ 6 ತಿಂಗಳ ನಂತರ ಸಾಲವನ್ನು 60 ಸಮಾನ ಕಂತುಗಳಲ್ಲಿ ಮರುಪಾವತಿಸಬೇಕಿದ್ದು, ಸಾಲ ಬಿಡುಗಡೆ ವೇಳೆ ಶೇ. 2 ರಷ್ಟು ಸೇವಾ ಶುಲ್ಕ ಕಡಿತಗೊಳಿಸಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ನಿಗಮದ ಅಧಿಕೃತ ಆನ್‌ಲೈನ್ ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗೂ ಅಂಕಪಟ್ಟಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ ಅಥವಾ ತಾಲೂಕು ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ. https://kmdc.karnataka.gov.in/
ಇದನ್ನು ಓದಿ: ರಾಹುಲ್ ಗಾಂಧಿ ಅರೆಸ್ಟ್ ಹಿನ್ನಲೆ : ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ







1 thought on “ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! 2026ರ ಶೈಕ್ಷಣಿಕ ಸಾಲಕ್ಕೆ ಅರ್ಜಿ ಆರಂಭ appplication invitation for scholarship 2026”