ಬಿಸಿ ಬಿಸಿ ಸುದ್ದಿ ಕೃಷಿ ಪಂಡಿತರು ಸರ್ಕಾರಿ ಯೋಜನೆಗಳು ಸಾಧಕರ ಹೆಜ್ಜೆ ಗುರುತು ನಮ್ಮೂರ ಸೊಬಗು

ಪ್ರಧಾನ ಸಂಪಾದಕರು :

ಲೇಖಕರು September 2026

ಡಾ. ಸಿದ್ದಲಿಂಗಪ್ಪ ಕಣ್ಣಿ

ನಮ್ಮ ಧರ್ಮದ ದಾರಿ ದಿನ ಪತ್ರಿಕೆಯ ಹಿರಿಯ ಸಂಪಾದಕರಾಗಿರುವ ಡಾ. ಸಿದ್ದಲಿಂಗಪ್ಪ ಕಣ್ಣಿ ಇವರು ಬಿಎ, ಬಿಎಡ್ , ಎಂಎ ಪದವಿಧರರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಸಹ ಪಡೆದವರು.

ಕಲ್ಬುರ್ಗಿಯ ಪ್ರಸಿದ್ಧ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಬಿ ಎಡ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬ ಸೃಜನಶೀಲ ಕವಿ, ಸಾಹಿತಿ ಆಗಿರುವ ಡಾ. ಸಿದ್ದಲಿಂಗಪ್ಪ ಕಣ್ಣಿ ಅವರು, ಸಾಹಿತ್ಯ, ಸಂಗೀತದ ಜೊತೆ ಜೊತೆಗೆ ಸಹಜ ಕೃಷಿ, ಸಮಾಜ ಸೇವೆ ಹಾಗೂ ಪತ್ರಿಕೋದ್ಯಮ ಸೇರಿದಂತೆ ಸಮಾಜದ ವಿವಿಧ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.

ಧರ್ಮದ ದಾರಿ ಪತ್ರಿಕೆಯ ಪ್ರಧಾನ ಸಂಪಾದಕರೂ ಆಗಿರುವ ಡಾ. ಸಿದ್ದಲಿಂಗಪ್ಪ ಕಣ್ಣಿ ಅವರು, ತಮ್ಮ ಹರಿತ ಲೇಖನ, ಸಾಮಾಜಿಕ ಕಳಕಳಿಯ ಬರಹಗಳ ಮೂಲಕ ಹೆಸರುವಾಸಿಯಾಗಿದ್ದಾರೆ.


ಸಂಪಾದಕರು :

ಲೇಖಕರು September 2026

ಶ್ರೀ ಯೋಗೇಶ್ ಉಮ್ಮರ್ಗಿ

ರಾಜಕೀಯ ವರದಿಗಳ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಯೋಗೇಶ್ ಉಮ್ಮರ್ಗಿ ಅವರ ಪತ್ರಿಕೋದ್ಯಮ ನಂಟು ಎರಡು ದಶಕದ್ದು. 2005 ರಲ್ಲಿ ಕಲಬುರಗಿ ವಾಣಿ ದಿನಪತ್ರಿಕೆಯಲ್ಲಿ ವರದಿಗಾರಿಕೆ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟವರು ಯೋಗೇಶ್ ಉಮ್ಮರ್ಗಿ.

ಸದ್ಯ ಕಲಬುರ್ಗಿಯಿಂದ ಪ್ರಕಟಗೊಳ್ಳುತ್ತಿರುವ ಹಾಗೂ ಮಾಧ್ಯಮ ಪಟ್ಟಿಯಲ್ಲಿರುವ ವಿಕಾಸ ವಾಣಿ ಕನ್ನಡ ದಿನಪತ್ರಿಕೆಯನ್ನು ಆರಂಭಿಸಿದ್ದೇ ಯೋಗೇಶ್ ಉಮ್ಮರಗಿ ಅವರು ಎನ್ನುವುದು ಹೆಮ್ಮೆಯ ವಿಷಯ.

ಕಾನೂನು ಪದವೀಧರರಾಗಿರುವ ಶ್ರೀ ಯೋಗೇಶ್ ಉಮ್ಮರಗಿ ಇವರು, ವಕೀಲ ವೃತ್ತಿಯ ಜೊತೆ ಜೊತೆಗೆ ಪತ್ರಿಕೋದ್ಯಮದಲ್ಲಿ ಸದಾ ಪಾದರಸದಂತೆ ಸಕ್ರಿಯವಾಗಿದ್ದಾರೆ. ತಮ್ಮ ಹರಿತ ಲೇಖನ, ರಾಜಕೀಯ ಆಸಕ್ತಿ ಗಳಿಂದಾಗಿ ಹೆಸರಾಗಿದ್ದಾರೆ. ಸದ್ಯ ಇವರು ಧರ್ಮದ ದಾರಿಯ ಸಂಪಾದಕರಾಗಿ ಪತ್ರಿಕೋದ್ಯಮ ಸೇವೆ ಮುಂದುವರೆಸಿದ್ದಾರೆ.