ಬಿಸಿ ಬಿಸಿ ಸುದ್ದಿ ಕೃಷಿ ಪಂಡಿತರು ಸರ್ಕಾರಿ ಯೋಜನೆಗಳು ಸಾಧಕರ ಹೆಜ್ಜೆ ಗುರುತು ನಮ್ಮೂರ ಸೊಬಗು

RSS ಪಥಸಂಚನದಲ್ಲಿ ಭಾಗಿಯಾದ ಶಿಕ್ಷಕರಿಗೆ ಬಿಗ್ ರಿಲೀಫ್ | ಅಮಾನತ್ತು ಆದೇಶಕ್ಕೆ KAT ತಡೆಯಾಜ್ಞೆ

Published on: Thursday, September 3, 2026 6:14 PM
KAT big relief for RSS Teachers

ಕಲಬುರಗಿ : RSS ಪಥಸಂಚನದಲ್ಲಿ ಭಾಗಿಯಾದ ಶಿಕ್ಷಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಶಿಕ್ಷಕರನ್ನ ಅಮಾನತುಗೊಳಿಸಿ DDPI ಹೊರಡಿಸಿದ್ದ ಆದೇಶಕ್ಕೆ KAT ತಡೆಯಾಜ್ಞೆ ನೀಡಿದೆ.

ಪ್ರಕರಣದ ಹಿನ್ನಲೆ ಏನು ?

ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕರಿಬ್ಬರು ಕಳೆದ ವರ್ಷ ಅಂದರೆ 12-10-2025 ರಂದು ವಿಜಯಪುರ ಜಿಲ್ಲೆ ತಾಳಿಕೋಟೆಯಲ್ಲಿ ನಡೆದ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.

DDPI ಅಮಾನತ್ತು ಆದೇಶ

ಶಿಕ್ಷಕರಾದ ಗುರುರಾಜ್ ಜೋಷಿ ಹಾಗೂ ಅಣ್ಣಾ ಸಾಹೇಬ್ ದೇಶಮುಖ ಅವರು ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾದ ಬಗ್ಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಜುಮ್ಮಣ್ಣ ಗುಡಿಮನಿ ಇವರು ಯಾದಗಿರಿ ಶಿಕ್ಷಣ ಇಲಾಖೆ ಉಪನಿರ್ದೇಶಕ DDPI ಅವರಿಗೆ ಲಿಖಿತ ದೂರು ಸಲ್ಲಿಸಿ ಈ ಶಿಕ್ಷಕರನ್ನ ಅಮಾನತ್ತು ಮಾಡುವಂತೆ ಆಗ್ರಹಿಸಿದ್ದರು. ಈ ದೂರಿನ ಆಧಾರದ ಮೇಲೆ ಯಾದಗಿರಿ ಡಿಡಿಪಿಐ ಅವರು, ಆರ್ ಎಸ್ ಎಸ್ ಪತ ಸಂಚಲನದಲ್ಲಿ ಪಾಲ್ಗೊಂಡ ಕಾರಣ ಈ ಇಬ್ಬರು ಶಿಕ್ಷಕರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

Read this also : BJP Protest in Kalburagi : ಬೈಕ್ ಸವಾರನ ಹೆಲ್ಮೆಟ್ ನೆಲಕ್ಕೆಸೆದು ತೇಲ್ಕೂರ ಆಕ್ರೋಶ

KAT ಮೊರೆ ಹೋಗಿದ್ದ ಶಿಕ್ಷಕರು

ಯಾದಗಿರಿ ಡಿಡಿಪಿ ಅವರು ತಮ್ಮನ್ನು ಅಮಾನತ್ತು ಮಾಡಿರುವ ಆದೇಶವನ್ನು ಪ್ರಶ್ನಿಸಿ, ಹುಣಸಗಿ ತಾಲೂಕಿನ ಸರ್ಕಾರಿ ಶಾಲಾ ಶಿಕ್ಷಕರಾದ ಗುರುರಾಜ ಜೋಶಿ ಮತ್ತು ಅಣ್ಣ ಸಾಹೇಬ್ ದೇಶಮುಖ್ ಇವರು ಕಲಬುರಗಿಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ KAT ಮೊರೆ ಹೋಗಿದ್ದರು. ತಮ್ಮ ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಈ ಶಿಕ್ಷಕರು KAT ಗೆ ಮೇಲ್ಮನವಿ ಸಲ್ಲಿಸಿದರು.

RSS ಪಥಸಂಚನದಲ್ಲಿ ಭಾಗಿಯಾದ ಶಿಕ್ಷಕರಿಗೆ ಬಿಗ್ ರಿಲೀಫ್

ಆರ್ ಎಸ್ ಎಸ್ ಪತ ಸಂಚಲನದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕೆ ಅಮಾನತ್ತುಗೊಂಡಿದ್ದ ಸರ್ಕಾರಿ ಶಾಲಾ ಶಿಕ್ಷಕರಾದ ಗುರುರಾಜ್ ಜೋಶಿ ಹಾಗೂ ಅಣ್ಣ ಸಾಹೇಬ್ ದೇಶಮುಖ್ ಇವರಿಗೆ, ಕಲಬುರಗಿಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಬಿಗ್ ರಿಲೀಫ್ ನೀಡಿದೆ.

Read this also : Lokayukta trap | ಪೋಲಿಸರೇ ಅರೆಸ್ಟ್ !

ಯಾದಗಿರಿ ಡಿ ಡಿ ಪಿ ಐ ಅವರು ಹೊರಡಿಸಿದ್ದ ಈ ಇಬ್ಬರು ಶಿಕ್ಷಕರ ಅಮಾನತ್ತು ಆದೇಶಕ್ಕೆ KAT ಇಂದು ತಡೆಯಾಜ್ಞೆ ನೀಡಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನ ಬರುವ ಅಕ್ಟೋಬರ್ ತಿಂಗಳಿಗೆ ಮುಂದೂಡಿದೆ.

ಶಿಕ್ಷಕರ ವಾದವೇನಿತ್ತು ?

ಆರ್ ಎಸ್ ಎಸ್ ಪಥ ಸಂಚಲನದಲ್ಲಿ ತಾವು ಭಾಗಿಯಾಗಿದ್ದನ್ನು ಈ ಶಿಕ್ಷಕರು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ ನಾವು ಸರ್ಕಾರಿ ರಜಾ ದಿನವಾದ ರವಿವಾರ ಈ ಪತ ಸಂಚಲನದಲ್ಲಿ ಪಾಲ್ಗೊಂಡಿದ್ದೇವೆ. ಆರ್ ಎಸ್ ಎಸ್ ನಂತಹ ಸಾಮಾಜಿಕ ಸಂಘಟನೆ ನಡೆಸುವ ಪಥಸಂಚಲನದಲ್ಲಿ ಪಾಲ್ಗೊಳ್ಳುವುದು ಅಪರಾಧವೇ ನಲ್ಲ ಎನ್ನುವುದು ನಮ್ಮ ಭಾವನೆ. ಹಾಗಾಗಿ ಡಿಡಿಪಿಐ ಅವರ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಎಂದು ಈ ಶಿಕ್ಷಕರು KAT ಮುಂದೆ ವಾದ ಮಂಡಿಸಿದ್ದರು.

ಮಹತ್ವ ಪಡೆದುಕೊಂಡ ತಡೆಯಾಜ್ಞೆ

ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಗೃಹ ಸಚಿವ ಪ್ರಿಯಾಂಕ ಖರ್ಗೆ ಮತ್ತು ಆರ್ ಎಸ್ ಎಸ್ ನಡುವೆ ಬಹಿರಂಗ ಸಂಘರ್ಷ ನಡೆಯುತ್ತಿರುವ ಹೊತ್ತಲ್ಲೇ ಆರ್ ಎಸ್ ಎಸ್ ಪಥಾ ಸಂಚಲನದಲ್ಲಿ ಪಾಲ್ಗೊಂಡ ಶಿಕ್ಷಕರ ಅಮಾನತ್ತು ಆದೇಶಕ್ಕೆ KAT ತಡೆಯಾಜ್ಞೆ ನೀಡಿರುವುದು ಮಹತ್ವದ ಆದೇಶ ಎನಿಸಿದೆ

Join WhatsApp

Join Now

Join Telegram

Join Now