Application for anganvadi worker post|ಅಂಗನವಾಡಿ ವರ್ಕರ್ ಆಗಿ ಕೆಲಸ ಮಾಡುವ ಆಸಕ್ತಿಯೇ ? ಅವಕಾಶ ಇಲ್ಲಿದೆ | ಕಲಬುರಗಿ,ಜೂ.29 : ಅಂಗನವಾಡಿ ಕಾರ್ಯಕರ್ತೆಯಾಗಿ ಅಥವಾ ಸಹಾಯಕರಾಗಿ ಸೇವೆ ಸಲ್ಲಿಸಲು ನಿಮಗೆ ಆಸಕ್ತಿ ಇದೆಯೇ ? ಹಾಗಾದ್ರೆ ತಡ ಏಕೆ ? ನಾವು ಪೂರ್ಣ ಮಾಹಿತಿ ಕೊಡ್ತಿವಿ. ವಿವರವಾಗಿ ಸುದ್ದಿ ಓದಿ, ಅರ್ಜಿ ಸಲ್ಲಿಸಿ. ಆ ಹುದ್ದೆ ನಿಮ್ಮದಾದರೂ ಆಗಬಹುದು.
Application for anganvadi worker post
ಹೌದು ! 2026-27ನೇ ಸಾಲಿನ ಕಲಬುರಗಿ (ಗ್ರಾಮೀಣ) ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಿಂದ ಒಂದು ಬಾರಿಗೆ ಭೌತಿಕ (offline) ಆಫ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಗ್ರಾಮೀಣ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
Read also this : Exciting celebration of Kara hunnime| ಕಾರಹುಣ್ಣಿಮೆಯಂದು ಕರಿ ಹರಿಯುವ ಪದ್ದತಿ ಅದೆಷ್ಟು ರೋಚಕ ಗೊತ್ತಾ ? ಕರಿ ಹರಿಯುವ ಮುನ್ನ ಹೆಂಡತಿಯ ತಾಳಿ ತೆಗೆಯೋದು ಏಕೆ ?
ಅರ್ಹ ಮಹಿಳಾ ಅಭ್ಯರ್ಥಿಗಳು 2026ರ ಜುಲೈ 1 ರಿಂದ 31 ರ ಸಂಜೆ 5.30ರೊಳಗಾಗಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಅರ್ಜಿ ಸಲ್ಲಿಕೆ ನಂತರ ದಾಖಲಾತಿ ಪರಿಶೀಲನೆ ನಡೆಯುತ್ತದೆ. ನಂತರ ಅರ್ಹರರಿಗೆ ಅವಕಾಶ ಸಿಗಲಿದೆ.







xxgyzvdtoktfkltwkynprgffxyekut