ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

Vanaspati medicine for broken bones |ಮೂಳೆ ಪುಡಿ ಪುಡಿಯಾದ್ರೂ ಇಲ್ಲಿದೆ ಪರಿಹಾರ : ನಾಲ್ಕು ತಲೆಮಾರಿನ ವನಸ್ಪತಿ ಔಷಧಿ, ಫೇಲೇ ಇಲ್ಲ

July 30, 2026 10:19 AM
---Advertisement---

ಕಲಬುರಗಿ ಜು.29:- ಮೂಳೆ ಪುಡಿ ಪುಡಿಯಾದ್ರೂ ಇಲ್ಲಿದೆ ಪರಿಹಾರ : ನಾಲ್ಕು ತಲೆಮಾರಿನ ವನಸ್ಪತಿ ಔಷಧಿ, ಫೇಲೇ ಇಲ್ಲ.. Vanaspati medicine for broken bones. ಹೌದು ! ಅಪಘಾತವೋ ಮತ್ತಿತರ ಕಾರಣಕ್ಕೆ ಮೂಳೆ ಮುರಿದ್ರೆ, ಕ್ರ್ಯಾಕ್ ಆದ್ರೆ, ಪುಡಿ ಪುಡಿ ಆದ್ರೆ ಇಲ್ಲಿದೆ ಪರಿಹಾರ.

ಇತ್ತಿಚಿನ ದಿನಗಳಲ್ಲಿ ಆಹಾರ ಪದ್ದತಿಯಲ್ಲಿನ ವ್ಯತ್ಯಾಸ ಹಾಗೂ ದೈನಂದಿನ ಚಟುವಟಿಗಳಲ್ಲಿನ ಬದಲಾವಣೆಯಿಂದಾಗಿ ಸಾಕಷ್ಟು ಜನರಲ್ಲಿ ಕ್ಯಾಲ್ಸಿಯಮ್ ಕೊರತೆ ಕಂಡುಬರುತ್ತಿದೆ. ಪರಿಣಾಮ ಸಣ್ಣ ಅಪಘಾತ ಆದ್ರೂ ಎಲುಬು ಕಟ್ ಆಗೋದು, ಕ್ರ್ಯಾಕ್ ಆಗೋದು, ಪುಡಿ ಆಗೋದು ಕಾಮನ್ ಆಗಿ ಬಿಟ್ಟಿದೆ. ಈ ರೀತಿ ಎಲುಬಿನ ಸಮಸ್ಯೆಗಳಿಗೆ ಈ ವನಸ್ಪತಿಯಲ್ಲಿದೆ ಪೂರ್ಣ ಪರಿಹಾರ. ನಾಲ್ಕು ತಲೆಮಾರುಗಳಿಂದ ನೀಡಲಾಗುತ್ತಿರುವ ವನಸ್ಪತಿಯ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

ಮೂಳೆ ಕಟ್ ಆದ್ರೆ, ಕ್ರ್ಯಾಕ್ ಆದ್ರೆ, ಪುಡಿ ಆದ್ರೆ ಅದಕ್ಕೆ ಅಲೋಪತಿ ವೈದ್ಯರಲ್ಲಿ ಸರ್ಜರಿಯೊಂದೇ ಪರಿಹಾರ. ಅದಾದ ನಂತರವೂ ತಿಂಗಳುಗಳ ಗಟ್ಟಲೇ ಬೋನ್ ಕಟ್ ಆದ ಜಾಗಕ್ಕೆ ಪ್ಲಾಸ್ಟರ್ ಮಾಡಿಸಿಕೊಂಡೇ ಇರಬೇಕು. ಅದು ಸರಿಯೂ ಹೌದು ! ಅನೀವಾರ್ಯವೂ ಹೌದು !

ವನಸ್ಪತಿ ಪರಿಹಾರ | Vanaspati medicine for broken bones

ಮೂಳೆ ಪುಡಿ ಪುಡಿಯಾದ್ರೂ ಇಲ್ಲಿದೆ ಪರಿಹಾರ : ನಾಲ್ಕು ತಲೆಮಾರಿನ ವನಸ್ಪತಿ ಔಷಧಿ, ಫೇಲೇ ಇಲ್ಲ | Vanaspati medicine for broken bones | ವನಸ್ಪತಿ ಮೂಲಕ ಪೂರ್ಣ ಗುಣ ಮಾಡುವ ಪುರಾತನ ಪದ್ದತಿಯೊಂದು ಇಲ್ಲಿದೆ. ಇವರು ಕೊಡುವ ವನಸ್ಪತಿ ಔಷಧಿ ಕೇವಲ ಮೂರು ದಿನಗಳ ಕಾಲ ಕುರಿಯ ಹಾಲಿನಲ್ಲಿ ಸೇವಿಸಬೇಕು. ಕ್ರ್ಯಾಕ್ ಆದ ಮೂಳೆಗಳು, ಕಟ್ ಆದ ಮೂಳೆಗಳು, ಪುಡಿಯಾದ ಮೂಳೆಗಳನ್ನು ಜಾಯಿಂಟ್ ಆಗುತ್ತವೆ. ಜೊತೆಗೆ ಇದು ಪೇನ್ ಕಿಲ್ಲರ್ ರೂಪದಲ್ಲೂ ಕೆಲಸ ನಿರ್ವಹಿಸುತ್ತದೆ‌. ನೋವು ಸಹ ನಿವಾರಣೆಯಾಗುತ್ತದೆ. ಮೂರು ದಿನಗಳಲ್ಲಿ ಬಹುತೇಕ ಕಡಿಮೆಯಾಗುತ್ತದೆ‌. ಮೂಳೆ ಗಾಯದ ತೀವ್ರತೆ ವಿಪರೀತವಾಗಿದ್ದರೆ, ಒಮ್ಮೆ ಬಳಸಿದ 15 ದಿನಗಳ ನಂತರ ಮತ್ತೊಮ್ಮೆ ಅದೇ ಔಷಧಿ ಬಳಸಲು ಸೂಚಿಸುತ್ತಾರೆ. ಇದರಿಂದ ಸಾಕಷ್ಟು ಪರಿಹಾರ ಸಿಕ್ಕಿದೆ ಎಂದು ಬಹಳಷ್ಟು ಜನ ನಂಬಿದ್ದಾರೆ. ಹಾಗಾಗಿಯೇ ನಿತ್ಯವೂ ನೂರಾರು ಜನರು ಈ ಔಷಧಕ್ಕಾಗಿ ಬರುತ್ತಲೇ ಇರುತ್ತಾರೆ.

ಈ ವನಸ್ಪತಿ ಔಷಧಿ ಎಲ್ಲಿ ಸಿಗುತ್ತದೆ ?

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೂಕ್ಷೇತ್ರ ಗಾಣಗಾಪೂರ ದತ್ತಾತ್ರೆಯ ದೇವಸ್ಥಾನ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ? ಅದೇ ಅಫಜಲಪುರ ತಾಲೂಕಿನ ಗಾಣಗಾಪೂರಕ್ಕೆ ಹೋಗುವ ಮಾರ್ಗದಲ್ಲಿ ಚೌಡಾಪೂರ ಎನ್ನುವ ಪಟ್ಟಣ ಇದೆ. ಕಲಬುರಗಿ ನಗರದಿಂದ ಚೌಡಾಪೂರ ಪಟ್ಟಣ ಸುಮಾರು 30 ಕಿಲೋ ಮೀಟರ್ ಅಂತರವಿದೆ. ಚೌಡಾಪೂರದಿಂದ ಎಡಕ್ಕೆ KPR ಸಕ್ಕರೆ ಕಾರ್ಖಾನೆ ಮುಂಬಾಗದಿಂದ ಸುಮಾರು 15 ಕಿಲೋ ಮೀಟರ್ ತೆರಳಿದರೆ “ಹಸರಗುಂಡಗಿ” ಎನ್ನುವ ಗ್ರಾಮ ಇದೆ. ಈ ಹಸರಗುಂಡಗಿ ಗ್ರಾಮದಲ್ಲಿಯೇ ತಲೆ ಮಾರುಗಳಿಂದ ಈ ಔಷಧಿ ನೀಡಲಾಗುತ್ತದೆ.

ಹಸರಗುಂಡಗಿ ಗ್ರಾಮದಲ್ಲಿ ಬಸವಣಪ್ಪ ಎನ್ನುವ ದೇವಸ್ಥಾನ ಇದೆ. ಈ ದೇವಸ್ಥಾನದಲ್ಲಿಯೇ ಜಾಡರ ಕುಟುಂಬವೊಂದು ವಾಸಿಸುತ್ತದೆ. ಈ ಕುಟುಂಬ ಮುನ್ನೂರು ವರ್ಷಗಳಿಂದ ಅಂದ್ರೆ ನಾಲ್ಕು ತಲೆಮಾರುಗಳಿಂದ ಔಷಧಿ ನೀಡುತ್ತಾ ಬಂದಿದೆ.

Read this also : ಅನ್ನ – ನೀರಿಲ್ಲದೇ, ಗಾಳಿ – ಬೆಳಕಿಲ್ಲದೇ ಕಡಣಿಯಲ್ಲಿ ಕಠಿಣ ಅನುಷ್ಠಾನ

ಏನಿದೆ ಈ ಔಷಧಿಯಲ್ಲಿ ?

ಔಷಧಿ ಬಯಸಿ ಬರುವವರಿಂದಲೇ ಇಲ್ಲಿ 200 ಗ್ರಾಮ್ ಬಳ್ಳೋಳ್ಳಿ, 400 ಗ್ರಾಮ್ ಅಡುಗೆ ಎಣ್ಣೆ, ಒಂದು ತೊಲೆ ಅಂದರೆ 11 ಗ್ರಾಮ್ ನಷ್ಟು ಕಾಳು ಮೆಣಸು, ತೆಂಗು ತರಿಸಲಾಗುತ್ತದೆ. ಈ ಪೈಕಿ 200 ಗ್ರಾಮ್ ಅಡುಗೆ ಎಣ್ಣೆ ಬಸವಣ್ಣ ದೇವಸ್ಥಾನದಲ್ಲಿ ದೀಪಕ್ಕೆ ಬಳಕೆ ಮಾಡಲಾಗುತ್ತದೆ. ಇಲ್ಲಿ ಬಸವಣ್ಣನ ಮುಂದೆ ನಂದಾದೀಪ ಇದೆ. ಅಂದರೆ ದಿನದ 24 ಗಂಟೆ ನಿರಂತರ ದೀಪ ಇಲ್ಲಿ ಬೆಳಗುತ್ತಲೇ ಇರುತ್ತದೆ‌. ಇನ್ನು ತೆಂಗು ಸಹ ಬಸವಣ್ಣ ದೇವರಿಗೆ ಅರ್ಪಿಸಲಾಗುತ್ತದೆ. ಉಳಿದ 200 ಗ್ರಾಮ್ ಬೆಳ್ಳುಳ್ಳಿ, 11 ಗ್ರಾಮ್ ಮೆಣಸು, 200 ಗ್ರಾಮ್ ಅಡುಗೆ ಎಣ್ಣೆಯ ಜೊತೆಗೆ ಔಷದಿಯ ಸಸ್ಯದ ತಪ್ಪಲೊಂದಿಷ್ಟು ಸೇರಿಸಿ ಅಲ್ಲಿಯೇ ಇರುವ ಒಳ್ಳಿನಲ್ಲಿ ರುಬ್ಬಿ ಕೊಡಲಾಗುತ್ತದೆ‌. ಎಲ್ಲರ ಸಮ್ಮುಖದಲ್ಲಿಯೇ ಈ ಮಿಶ್ರಣ ತಯಾರಿಸಿ ಮೂರು ದಿನ ಕುರಿಯ ಹಾಲಿನಲ್ಲಿ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವಂತೆ ಸೂಚಿಸುತ್ತಾರೆ. ಈ ಔಷಧಿಯ ಸಸ್ಯವೇ ಬಹಳ ಮುಖ್ಯವಾಗಿದ್ದು, ಇದನ್ನು ಕಲಬುರಗಿ, ವಿಜಯಪುರ ಭಾಗದಿಂದ ತರುವುದಾಗಿ ಈ ಜಾಡರ ಕುಟುಂಬದ ಔಷಧಿ ಕೊಡುವ ಹೊಣೆ ಹೊತ್ತಿರುವ ಶ್ರೀಶೈಲ ಜಾಡರ್ ಹೇಳುತ್ತಾರೆ.

ಸೋಮವಾರ ಔಷಧಿ ಕೊಡಲ್ಲ.. ಗ್ರಾಮದಲ್ಲಿ ದುರಂತ ಆದ್ರೆ ಔಷಧಿ ತಯಾರಿಸಲ್ಲ

ನಿತ್ಯವೂ ಇಲ್ಲಿ ಈ ಔಷಧಿ ಕೊಡಲಾಗುತ್ತದೆ. ಆದ್ರೆ ವಾರದಲ್ಲಿ ಪ್ರತಿ ಸೋಮವಾರ ಮಾತ್ರ ಔಷಧಿ ಕೊಡುವುದಿಲ್ಲ. ಅಲ್ಲದೇ ಹಸರಗುಂಡಗಿ ಗ್ರಾಮದಲ್ಲಿ ಯಾರೇ ಸಾವಿಗೀಡಾದ ಸುದ್ದಿ ತಿಳಿದರೆ ಕೂಡಲೇ ಔಷಧಿ ತಯಾರಿಕೆ ಬಂದ್ ಮಾಡಲಾಗುತ್ತದೆ. ಹಾಗಾಗಿ ಹೊರ ಭಾಗದಿಂದ , ದೂರದ ಊರುಗಳಿಂದ ಬರುವವರು ಒಮ್ಮೆ ಫೋನ್ ಮಾಡಿ ವಿಚಾರಿಸಿಯೇ ಬರುವುದು ಒಳಿತು.

ಔಷಧಿ ನೀಡುತ್ತಾ ಬಂದಿದೆ.

Read this also : ಕಲಬುರಗಿ ಟು ಕಾಶ್ಮೀರ ಟೂರ್ : ವೈಷ್ಣೋದೇವಿ ದರ್ಶನ ಭಾಗ್ಯ, ಕುದುರೆಗಳ ಚಾಣಾಕ್ಷತೆ, ಸವಾರನ ಸಂಕಟ : ಪ್ರವಾಸ ಕಥನ

ಅಲೋಪತಿ ಔಷಧಿ ಜೊತೆಗೆ ಸೇವಿಸಲು ಅವಕಾಶ

ಮೂಳೆ ಮುರಿತಕ್ಕೆ ಸರ್ಜರಿ, ಪ್ಲಾಸ್ಟರ್, ಕೈ ಕಾಲಿಗೆ ಬೆಲ್ಟ್ ಹಾಕುವುದು ಸೇರಿದಂತೆ ಯಾವುದೇ ಚಿಕಿತ್ಸೆ ನಡೆಯುತ್ತಿರಲಿ. ಜೊತೆಗೆ ವೈದ್ಯರು ಸೂಚಿಸಿದ ಯಾವುದೇ ಮಾತ್ರೆಗಳು ಸೇವಿಸುತ್ತಿದ್ದರೂ ಸಹ ಈ ಔಷಧಿ ಸೇವನೆಗೆ ಯಾವುದೇ ಅಡ್ಡಿ ಇಲ್ಲ ಎನ್ನುತ್ತಾರೆ ಔಷಧಿ ನೀಡುವ ಶ್ರೀಶೈಲ್ ಜಾಡರ್

ಐದು ಜನ ಸಹೋದರರಿಗೆ ವರ್ಷಕ್ಕೊಮ್ಮೆ ಸರದಿ

ಹಸರಗುಂಡಗಿಯಲ್ಲಿ ಈ ವನಸ್ಪತಿ ನೀಡುವ ಜಾಡರ್ ಕುಟುಂಬದಲ್ಲಿ ಸದ್ಯ ಐದು ಜನ ಸಹೋದರರಿದ್ದಾರೆ. ಈ ಐದು ಜನ ಸಹೋದರರು ವರ್ಷಕ್ಕೊಬ್ಬರಂತೆ ಔಷಧಿ ನೀಡುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ಒಬ್ಬ ಸಹೋದರನ ಕುಟುಂಬ ಒಂದು ವರ್ಷ ಈ ಔಷಧಿ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡರೆ, ಮಾರನೆ ವರ್ಷ ಮತ್ತೊಬ್ಬ ಸಹೋದರನ ಸರದಿ. ಉಳಿದ ಸಮಯ ಅವರೆಲ್ಲಾ ಕೃಷಿ ಸೇರಿದಂತೆ ತಮ್ಮ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಎಲ್ಲಿಂದೆಲ್ಲಾ ಜನ ಬರ್ತಾರೆ ?

ಈ ವನಸ್ಪತಿ ಔಷಧಿ ಮೂಳೆಗಳ ಸಮಸ್ಯೆಗೆ ಈ ಭಾಗದಲ್ಲಿ ಬಲು ಫೇಮಸ್ ಔಷಧಿಯಾಗಿದೆ. ಈ ಮೊದಲು ಕಲಬುರಗಿ ಜಿಲ್ಲೆಗಷ್ಟೇ ಫೇಮಸ್ ಆಗಿದ್ದ ಈ ಔಷಧಿ, ಸದ್ಯ ರಾಜ್ಯ ಹೊರ ರಾಜ್ಯಗಳಿಗೂ ವ್ಯಾಪಿಸಿದೆ. ಸೊಲ್ಲಾಪೂರ, ಲಾತೂರ, ಉಮ್ಮರಗಾ, ಪುಣೆ, ಕೊಲ್ಹಾಪೂರ, ಹೈದ್ರಾಬಾದ್, ಬೆಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಜನ ಇಲ್ಲಿಗೆ ಬಂದು ಔಷಧಿ ಪಡೆದುಕೊಂಡು ಹೋಗುತ್ತಾರೆ.

ಪ್ರತಿಯೊಬ್ಬರಿಂದ 500 ರೂಪಾಯಿ

ಈ ಮೊದಲು ಈ ಔಷಧಿ ಬೇಕಾದವರು ತಾವೇ ಬಳ್ಳುಳ್ಳಿ, ಕಾಳು ಮೆಣಸು, ಅಡುಗೆ ಎಣ್ಣೆ ತಗೊಂಡು ಬರುತ್ತಿದ್ದರು‌. ಆದ್ರೆ ಈಗ ಒಬ್ಬರಿಗೆ ಐನೂರು ರೂಪಾಯಿ ಫಿಕ್ಸ್ ಮಾಡಿದ್ದಾರೆ. ಬೆಳ್ಳುಳ್ಳಿ, ಮೆಣಸು, ತೆಂಗು, ಎಣ್ಣೆ ಏನೂ ತರುವ ಅಗತ್ಯ ಇಲ್ಲ. ಐನೂರು ರೂಪಾಯಿ ಕೊಟ್ಟರೆ ಸಾಕು ಎಲ್ಲವನ್ನೂ ಮಿಶ್ರಣ ಮಾಡಿ ರೆಡಿ ಮಾಡಿ ಕೊಡುತ್ತಾರೆ.

ಸಂಪರ್ಕಿಸಬಹುದಾದ ಮೊಬೈಲ್ ನಂಬರ್ 

ಯಾರಾದ್ರೂ ಈ ಔಷಧಿ ಬೇಕಾಗಿದ್ದಲ್ಲಿ ಔಷಧಿ ಕೊಡುವ ಜಾಡರ್ ಕುಟುಂಬದ ಶ್ರಿಶೈಲ್ ಜಾಡರ್ ಅವರ ಈ ಮೊಬೈಲ್ ನಂಬರಗೆ ಸಂಪರ್ಕಿಸಬಹುದು.

Read this also : ನಿರುದ್ಯೋಗಿ ಪದವಿಧರರಿಗೆ ಗುಡ್ ನ್ಯೂಸ್ : 15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಸಚಿವ ಸಂಪುಟ ಅನುಮೋದನೆ , ಸಂಪುಟದ ಇತರ ನಿರ್ಣಯಗಳೇನು ?

ಶ್ರೀಶೈಲ್ ಜಾಡರ್ ಹಸರಗುಂಡಗಿ ವನಸ್ಪತಿ ಔಷಧಿ ಕೊಡುವವರು

Mobile : 8123101855

9743457895

ಈ ಗ್ರಾಮದಲ್ಲಿ ಮುನ್ನೂರು ವರ್ಷಗಳಿಂದ ಈ ವನಸ್ಪತಿ ಕೊಡುತ್ತಿರುವ ಕುಟುಂಬ ಅಂದ್ರೆ ಈ ಜಾಡರ ಕುಟುಂಬ ಮಾತ್ರ. ಆದ್ರೆ ಇತ್ತಿಚಿಗೆ ಈ ಗ್ರಾಮದಲ್ಲಿ ನಾಯಿ ಕೊಡೆಗಳಂತೆ ಈ ಔಷದಿ ಕೊಡುವ ಸೆಂಟರಗಳು ತಲೆ ಎತ್ತಿವೆ. ಅವರಿಗೆಲ್ಲಾ ಹಿನ್ನಲೆಯಿಲ್ಲ. ಔಷಧಿ ಬೇಕಾದವರು ಸರಿಯಾಗಿ ವಿಚಾರಿಸಿ ಬಸವಣ್ಣ ಗುಡಿಯಲ್ಲಿ ಔಷಧಿ ಕೊಡುವ ಸ್ಥಳ ಕೇಳಿ ಅಲ್ಲಿಗೇ ಬಂದು ಔಷಧಿ ಪಡೆದುಕೊಳ್ಳಿ ಎಂದು ಸಲಹೆ ನೀಡುತ್ತಾರೆ ಔಷಧಿ ಕೊಡುವ ಶ್ರೀಶೈಲ್ ಜಾಡರ್. ಮೂಳೆ ಪುಡಿ ಪುಡಿಯಾದ್ರೂ ಇಲ್ಲಿದೆ ಪರಿಹಾರ : ನಾಲ್ಕು ತಲೆಮಾರಿನ ವನಸ್ಪತಿ ಔಷಧಿ, ಫೇಲೇ ಇಲ್ಲ | Vanaspati medicine for broken bones.

ವಿಶೇಷ ಸೂಚನೆ : ಅದಾಗ್ಯೂ ಇದನ್ನು ಅಗತ್ಯ ಇರುವವರು ಮತ್ತೊಮ್ಮೆ ಪರಿಶೀಲಿಸಿ, ಈ ಔಷಧಿ ತಮಗೆ ಸೂಕ್ತವೇ ಎನ್ನುವುದು ವಿಶ್ಲೇಷಿಸಿ ಪಡೆದುಕೊಳ್ಳುವುದು ಒಳ್ಳೆಯದು.

WhatsApp

Join Now

Telegram

Join Now

Leave a Comment