ಬಿಸಿ ಬಿಸಿ ಸುದ್ದಿ ಕೃಷಿ ಪಂಡಿತರು ಸರ್ಕಾರಿ ಯೋಜನೆಗಳು ಸಾಧಕರ ಹೆಜ್ಜೆ ಗುರುತು ನಮ್ಮೂರ ಸೊಬಗು

An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್‌ ಕೊರತೆ | ಸಂಪೂರ್ಣ ಪ್ರವಾಸ ಕಥನ

Published on: Wednesday, July 1, 2026 1:39 PM
Kalaburgi to kashmir trip

An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್‌ ಕೊರತೆ | ಸಂಪೂರ್ಣ ಪ್ರವಾಸ ಕಥನ| ಆತ್ಮೀಯರೇ ನಮಸ್ಕಾರ, ಎಲ್ಲರಿಗೂ ಶರಣು ಶರಣಾರ್ಥಿಗಳು.. ಕಲಬುರಗಿಯ ನಮ್ಮ ಗೆಳೆಯರ ಬಳಗ ಮತ್ತೊಂದು ಪ್ರವಾಸಕ್ಕೆ ಹೊರಟಿದ್ದೇವೆ. ಈ ಬಾರಿಯ ನಮ್ಮ ಪಯಣ ಭಾರತಾಂಬೆಯ ಮುಕುಟ ಜಮ್ಮು ಕಾಶ್ಮೀರದತ್ತ.. ಜೂ.29, 2026 ರಂದು ಬೆಳಿಗ್ಗೆ ಕಲಬುರಗಿ ಶರಣಬಸವೇಶ್ವರ ದರ್ಶನ ಪಡೆದು ಅಲ್ಲಿಂದಲೇ ಹೈದ್ರಾಬಾದ ಏರ್ ಪೋರ್ಟ್ ನತ್ತ ನಮ್ಮ ವಾಹನಗಳು ಹೊರಟವು. ಅದಕ್ಕೂ ಮೊದಲು ಅಮರನಾಥ ಯಾತ್ರೆ ಹೊರಟ ನಮಗೆ, ಹಲವು ಗೆಳೆಯರು ಶುಭ ಹಾರೈಸಿ ಕಳುಹಿಸಿಕೊಟ್ಟರು‌. ಹೈದ್ರಾಬಾದನಿಂದ ವಿಮಾನದ ಮೂಲಕ ದೆಹಲಿಗೆ ಬಂದೆವು. ಅಲ್ಲಿಂದ ಟ್ರೈನ್ ಮೂಲಕ ರಾತ್ರಿ ಇಡಿ ಪ್ರಯಾಣ ಮಾಡಿ ಬೆಳಿಗ್ಗೆ ಜಮ್ಮುವಿನ ಕಟ್ರಾ ತಲುಪಿದೆವು. ನಸುಕಿನ 4 ಗಂಟೆಯಿಂದಲೇ ಇಲ್ಲಿ ಬೆಳಗಾಗಿತ್ತು.ಅಷ್ಟೇ ಅಲ್ಲ ರಾತ್ರಿ 8 ಗಂಟೆಯಾದ್ರೂ ಇಲ್ಲಿ ಸೂರ್ಯನ ಬೆಳಕು ಇದ್ದೆ ಇರುತ್ತೆ ಎನ್ನುವುದು ಸೋಜಿಗ ಎನಿಸಿದರೂ ಅಪ್ಪಟ ಸತ್ಯ.

An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್‌ ಕೊರತೆ | ಸಂಪೂರ್ಣ ಪ್ರವಾಸ ಕಥನ September 2026

kalaburgi to jammu kashmir trip

‌An exciting experience of vaishnodevi Yatra | ಕುದುರೆ ಸವಾರಿ ಮೂಲಕ ಬೆಟ್ಟದತ್ತ..

ಜೂ.30 ರ ಬೆಳಿಗ್ಗೆ ಗೆಳೆಯ ಹಣಮಂತರಾವ ಭೈರಾಮಡಗಿ ಅವರು ತಂದಿದ್ದ ಕೇಂದ್ರ ಸಚಿವರೊಬ್ಬರ ಶಿಫಾರಸ್ಸು ಪತ್ರ ಹಿಡಿದು ವೈಷ್ಣೋದೇವಿ ಮಾತೆಯ ದರ್ಶನಕ್ಕೆ ಹೊರಟೇವು. ಗೆಳೆಯರಾದ ಬಾಬುರಾವ ಯಡ್ರಾಮಿ, ಸುನೀಲ್ ತಟ್ಟೆಂಪಲ್ಲಿ ಹಾಗೂ ನಾನು ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತಲು ಶುರು ಮಾಡಿದರೆ, ಡಾ. ಆನಂದ ಮಂಗಲಗಿ ನಮ್ಮ ಟೀಂನಲ್ಲಿ ಮೊದಲನೆಯವರಾಗಿ ಕುದುರೆ ಸವಾರಿ ಆಯ್ಕೆ ಮಾಡಿಕೊಂಡರು. ಹಣಮಂತರಾವ್ ಭೈರಾಮಡಗಿ ಹಾಗೂ ಶರಣಯ್ಯ ಹಿರೇಮಠ ಸಹ ಕುದುರೆ ಸವಾರಿ ಆರಂಭಿಸಿದರು.‌ ಸುಮಾರು 16 ಕಿಲೋ ಮೀಟರವರೆಗಿನ ಇಕ್ಕಟ್ಟಾದ ಮತ್ತು ಅತಿ ಎತ್ತರದ ದುರ್ಗಮ ದಾರಿಯಲ್ಲಿ ಕುದುರೆ ಸವಾರಿ ಮಾಡುತ್ತಾ ಮೂರು ಗಂಟೆಗಳಲ್ಲಿ ನಾವು ಮಾತೆಯ ಮಂದಿರ ತಲುಪಿದೆವು. ತ್ರೀಕೂಟ ಪರ್ವತಗಳ ಮೇಲೆ ನೆಲೆಸಿರುವ ಮಾತೆಯ ದರ್ಶನ ಪಡೆದು ಎಲ್ಲರೂ ಸಂತುಷ್ಟರಾದೆವು.

ಈ ದೇವಸ್ಥಾನದ ವಿಶೇಷತೆ ಅಂದರೆ ಇಲ್ಲಿ ಯಾವುದೇ ಮಾನವ ನಿರ್ಮಿತ ವಿಗ್ರಹಗಳಿಲ್ಲ. ನೈಸರ್ಗಿಕವಾಗಿ ರೂಪಗೊಂಡಿರುವ ಮೂರು ಶಿಲಾ ರೂಪಗಳನ್ನು ಇಲ್ಲಿ ಪೂಜಿಸಲಾಗುತ್ತದೆ. ತಾಮಸಗುಣದ ರೂಪವಾಗಿ ಮಹಾ ಕಾಳಿಯನ್ನು, ರಾಜಸ ಗುಣದ ರೂಪವಾಗಿ ಮಹಾಲಕ್ಷ್ಮಿಯನ್ನು ಹಾಗೂ ಸಾತ್ವಿಕ ಗುಣದ ರೂಪವಾಗಿ ಮಹಾಸರಸ್ವತಿ ಮಾತೆಯನ್ನು ಇಲ್ಲಿ ಪೂಜಿಸಲಾಗುತ್ತದೆ‌. ಮಾತೆಯರ ದರ್ಶನಕ್ಕಾಗಿ ಬೆಟ್ಟ ಹತ್ತಿದ ನಂತರ ಅತ್ಯಂತ ಕಿರಿದಾದ 42 ಮೀಟರ್ ಗುಹೆಯಲ್ಲಿ ಸಾಗಬೇಕು. ಅಲ್ಲಿ ತ್ರೀಮಾತೆಯರ ದಿವ್ಯ ದರ್ಶನವಾಗುತ್ತದೆ.

ಭೈರವನಾಥನಿಂದ ತಪ್ಪಿಸಿಕೊಳ್ಳಲು ಮಾತೆ ವೈಷ್ಣವಿ ದೇವಿ ಈ ಗುಹೆಯಲ್ಲಿ 9 ತಿಂಗಳು ಕಾಲ ತಪ್ಪಸ್ಸು ಮಾಡಿದಳು ಎನ್ನುವ ಪ್ರತಿತಿ ಇದೆ‌‌. ವೈಷ್ಣವಿದೇವಿ ಮಾತೆ ದರ್ಶನಕ್ಕಾಗಿ ದೇಶದ ಮೂಲೆಮೂಲೆಗಳಿಂದ ನಿತ್ಯ ಲಕ್ಷಾಂತರ ಜನ ಬರುತ್ತಲೇ ಇರುತ್ತಾರೆ. ಹಲವರು ನಡೆದುಕೊಂಡು ಬಂದರೆ, ಕುದುರೆ ಸವಾರಿ, ಡೋಲಿ, ಮಕ್ಕಳಿಗಾಗಿ ಹಾಗೂ ಲಗೆಜ್ ಸಾಗಿಸಲು ಟ್ರಾಲಿ ವ್ಯವಸ್ಥೆ ಸಹ ಇದೆ. ಮೊದಲೇ ಹಣದ ವ್ಯವಹಾರ ಮಾತನಾಡಿಕೊಂಡು ಪ್ರಯಾಣ ಶುರು ಮಾಡುವುದು ಉತ್ತಮ‌. ಕುದುರೆ ಸವಾರಿ, ಡೋಲಿ ಸವಾರಿ ಹಾಗೂ ಟ್ರಾಲಿ ಸೇವೆ ಪಡೆಯುವವರು ಸೇವೆ ನೀಡುವವರ ಐಡಿ ಕಾರ್ಡ ನಮ್ಮ ಕೊರಳಲ್ಲಿ ಹಾಕಿಕೊಳ್ಳುವುದು ಉತ್ತಮ. ಅವರ ಐಡಿ ಕಾರ್ಡ ನಮ್ಮ ಬಳಿ ಇರುವುದರಿಂದ ದಾರಿ ಮದ್ಯದಲ್ಲಿ ಟಿ- ಕಾಫಿಗೆ ನಿಂತಾಗ ನಮ್ಮ ಸವಾರರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.

An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್‌ ಕೊರತೆ | ಸಂಪೂರ್ಣ ಪ್ರವಾಸ ಕಥನ September 2026

ಭೈರವನಾಥ್ ದರ್ಶನ

ಮಾತೆ ವೈಷ್ಣವಿ ದೇವಿಯ ದರ್ಶನ ಪಡೆದುಕೊಂಡು ಮತ್ತೆ ಎಲ್ಲರೂ ಕುದುರೆ ಸವಾರಿ ಹೊರಟೇವು. ಈ ಬಾರಿಯ ಪಯಣ ಅಲ್ಲಿಂದ 3-4 ಕಿಲೋ ಮೀಟರ್ ಎತ್ತರದಲ್ಲಿರುವ ಭೈರವನಾಥನ ದರ್ಶನ ಪಡೆಯಲು. ಈ ದುರ್ಗಮ ಹಾಗೂ ಏರು ಮಾರ್ಗವನ್ನು ಕುದುರೆಗಳು ಹತ್ತುವ ಶೈಲಿಯೇ ಬಲು ರೋಚಕ ಹಾಗೂ ಅಚ್ಚರಿಗೊಳಿಸುವಂತಿದೆ. ಈ ಮೂಕ ಪ್ರಾಣಿಗಳು ಸಾಲಾಗಿ ಅತ್ಯಂತ ನಾಜುಕಾಗಿ, ತನ್ನ ಸವಾರನನ್ನು ಅತ್ಯಂತ ಸುರಕ್ಷಿತವಾಗಿ ಕರೆದುಕೊಂಡು ಹೋಗುವ ರೀತಿ ಇದೆಯಲ್ಲಾ ಇದು ನಿಜಕ್ಕೂ ಬೆರಗುಗೊಳಿಸುತ್ತದೆ.

Read more : application for Navodaya school 2026 |ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ನವೋದಯ ಪ್ರವೇಶಾತಿ ಅವಧಿ ವಿಸ್ತರಣೆ

ನಿಬ್ಬೆರಗಾಗಿಸಿದ ಹಾರ್ಸ ಯುರಿನ್ ಸ್ಪಾಟ್

ಕುದುರೆಗಳು ಈ ದುರ್ಗಮ‌ದಾರಿಯಲ್ಲಿ ಸಾಗುವಾಗ ಎಲ್ಲಿಂದರೆಲ್ಲಾ ಮೂರ್ತ ವಿಸರ್ಜನೆ ಮಾಡುವುದಿಲ್ಲವಂತೆ. ಕುದುಗಳ ಮೂರ್ತ ವಿಸರ್ಜನೆಗಾಗಿಯೇ ಮಾರ್ಗಮಧ್ಯದಲ್ಲೊಂದು ಹಾರ್ಸ್ ಯುರಿನ್ ಸ್ಪಾಟ್ ಇದೆ. ಪ್ರತಿ ಕುದುರಗೆಳು ಅಲ್ಲಿಯೇ ಮೂರ್ತ ವಿಸರ್ಜನೆ ಮಾಡುತ್ತವೆ. ಇದು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಹಿಂದಿನ ಕುದುರೆಗಳ ಕಾಲು ಜಾರುತ್ತವೆ ಎನ್ನುವ ಕಾರಣಕ್ಕೆ ಕುದುರೆಗಳಿಗೆ ನಿರ್ದಿಷ್ಟ ಸ್ಥಳದಲ್ಲೇ ಮೂತ್ರ ವಿಸರ್ಜನೆಯ ತರಬೇತಿ ನೀಡಲಾಗುತ್ತದೆ. ಕುದುರೆಗಳು ಇದನ್ನು ಅನುಸರಿಸುತ್ತವೆ ಎನ್ನುವುದು ಕೇಳಿ ನಿಜಕ್ಕೂ ನಿಬ್ಬೆರಗಾದೆವು.

An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್‌ ಕೊರತೆ | ಸಂಪೂರ್ಣ ಪ್ರವಾಸ ಕಥನ September 2026

ಬೈರವನಾಥ್ ನ ಪೌರಾಣಿಕ ಹಿನ್ನಲೆ

ಪೌರಾಣಿಕ ಹಿನ್ನಲೆಯ ಪ್ರಕಾರ ಭೈರವನಾಥ, ವೈಷ್ಣವಿ ದೇವಿಯನ್ನು ಪ್ರೀತಿಸುತ್ತಿದ್ದನಂತೆ. ಇದರಿಂದ ಕಿರುಕುಳಕ್ಕೆ ಒಳಗಾದ ವೈಷ್ಣೋದೇವಿ, ಆತನನ್ನು ಮಹಾ ಕಾಳಿ ರೂಪದಲ್ಲಿ ಸಂಹರಿಸಿದಳಂತೆ. ಸಾಯುವ ವೇಳೆ ಆತನ ಕೋರಿಕೆಯಂತೆ ಆತನನ್ನು ಆತನನ್ನು ಕ್ಷಮಿಸಿ, ನನ್ನ ದರ್ಶನಕ್ಕೆ ಬಂದವರು ನಿನ್ನ ದರ್ಶನ ಪಡೆಯಲೇಕು. ಅಂದಾಗ ಮಾತ್ರ ಅವರ ದರ್ಶನ ಪೂರ್ಣವಾಗುತ್ತದೆ ಎಂದು ವರ ನೀಡಿದಳಂತೆ. ಅದರ ಪ್ರಕಾರ ಮಾತೆ ವೈಷ್ಣೋದೇವಿಯ ದರ್ಶನ ಪಡೆದವರು ಕಡ್ಡಾಯವಾಗಿ ಭೈರವನಾಥನ ದರ್ಶನ ಪಡೆಯುತ್ತಾರೆ.

An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್‌ ಕೊರತೆ | ಸಂಪೂರ್ಣ ಪ್ರವಾಸ ಕಥನ September 2026

kalaburgi to kashmir trip

ಬೆಟ್ಟ ಇಳಿಯುವಾಗಿನ ಸಂಕಷ್ಟ

ಬೆಟ್ಟ ಹತ್ತುವಾಗ ಅರ್ಧ ಮಾರ್ಗದವರೆಗೆ ಅಂದರೆ ಅರ್ಧಕುವರಿ ಎನ್ನುವ ಸ್ಥಳದವರೆಗೆ ಸುಮಾರು ಏಳು ಕಿಲೋ ಮೀಟರ್ ದಾರಿಯನ್ನು ನಮ್ಮ ಟೀಂನಲ್ಲಿ ಹಲವರು ನಡೆದುಕೊಂಡು ಹತ್ತಿದರೆ, ಹಲವರು ಕುದುರೆ ಮೂಲಕ ಹತ್ತಿದರು. ಇಲ್ಲಿ ವೈಷ್ಣೋದೇವಿ ದರ್ಶನ ಮುಗಿಸಿ ಮತ್ತೆ ಕುದುರೆ ಸವಾರಿ ಮೂಲಕ ಭೈರವನಾಥನ ಸನ್ನಿದಿವರೆಗೆ ಬೆಟ್ಟ ಹತ್ತಿದೇವು. ಅಂದರೆ ಮಾರ್ಗಮದ್ಯದಲ್ಲಿ ಅಲ್ಲಲ್ಲಿ ಇಳಿದು ಕುದುರೆ ಹತ್ತಿದ ಕಾರಣ ಕುದುರೆ ಸವಾರಿ ತೀರಾ ಕಷ್ಟ ಎನಿಸಲಿಲ್ಲ. ಆದರೆ ಭೈರವನಾಥ್ ದೇವಸ್ಥಾನದಿಂದ ಕಟ್ರಾಗೆ ಮರಳಿ ಬರುವಾಗ 16+4= 20 ಕಿಲೋ ಮೀಟರ್ ದಾರಿಯನ್ನು ಎಲ್ಲೂ ಬ್ರೇಕ್ ಇಲ್ಲದೇ ಕುದುರೆ ಸವಾರಿ ಮಾಡಿದ್ದು ತೀರಾ ಆಯಾಸವೆನಿಸಿತು.

ಅಲ್ಲದೇ ಬೆಟ್ಟ ಹತ್ತುವಾಗನಕ್ಕಿಂತ ಬೆಟ್ಟ ಇಳಿಯುವಾಗಿನ ಕುದುರೆ ಸವಾರಿ ಪ್ರಯಾಸ ಎನಿಸುತ್ತದೆ. ನಮ್ಮ ಟೀಂನವರಿಗೂ ಈ ಅನುಭವವಾಯಿತು. ಕಟ್ರಾದಲ್ಲಿ ಹಲವರು ಮಸಾಜ್ ಮಾಡಿಕೊಂಡರೆ, ಇನ್ನು ಕೆಲವರ ಮೈ- ಕೈ ನೋವಿಗೆ ನಾನು ಮಾತ್ರೆಗಳನ್ನು ಕೊಡಬೇಕಾಯಿತು. ಜೂನ್ 29, 2026 ರಂದು ರಾತ್ರಿ ಊರಿನಿಂದ ತರಲಾಗಿದ್ದ ಜೋಳದ ರೊಟ್ಟಿ, ಶೇಂಗಾ ಹಿಂಡಿ, ಮೊಸರು, ಚಪಾತಿ, ಶೇಂಗಾ ಹೋಳಿಗೆ ಹಾಗೂ ಕಟ್ರಾದ ರೈಸ್ ತಿಂದು ಮಲಗಿದವರು, ಮರುದಿನ ನಸುಕಿನ 4 ಗಂಟೆಗೆ ಎದ್ದು ಜಮ್ಮುವಿನತ್ತ ರಸ್ತೆ ಮಾರ್ಗವಾಗಿ ಹೊರಟೇವು. ಜಮ್ಮು ಹಾಗೂ ಅಮರನಾಥ ಯಾತ್ರೆಯ ಅನುಭವ ಎಲ್ಲವೂ ನಿಮ್ಮ ಮುಂದಿಡುವೆ.. ನಿರೀಕ್ಷಿಸಿ..

An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್‌ ಕೊರತೆ | ಸಂಪೂರ್ಣ ಪ್ರವಾಸ ಕಥನ September 2026

kalaburgi to kashmir trip with friends

Join WhatsApp

Join Now

Join Telegram

Join Now