ಕಲಬುರಗಿ ಜು.17: ಎಲ್ಲೆಡೆ ಬೃಷ್ಟಾಚಾರ ತಾಂಡವವಾಡುತ್ತಿದೆ. ಹಣ ಕೊಟ್ರೆ ಮಾತ್ರ ಸರಕಾರಿ ಕೆಲಸ ಎನ್ನುವ ಪರಿಸ್ಥಿತಿ ತಲೆ ದೂರಿದೆ. ಅಧಿಕಾರಿಗಳು ಲಂಚಕ್ಕಾಗಿ ಜನರನ್ನು ಪೀಡಿಸುತ್ತಿರುವುದು ಬಹುತೇಕ ಕಡೆ ಸಾಮಾನ್ಯ ಎನ್ನುವಂತಾಗಿದೆ. ಅದ್ರೆ ಇಲ್ಲೊಬ್ಬ ಪಬ್ಲಿಕ್ ಪ್ರಾಸಿಕ್ಯೂಟರ್, ಹಣ ಮಾತ್ರ ಅಲ್ಲದೆ ನಾಲ್ಕಾರು ಜೊತೆ ಬ್ರ್ಯಾಂಡೆಡ್ ಬಟ್ಟೆಗಳು, ಸೀರೆಗಳು, ಆರು ಜೊತೆ ಶೂ- ಚಪ್ಪಲ್ ಗಳನ್ನ ಲಂಚದ ರೂಪದಲ್ಲಿ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಹೌದು ! ಕಲಬುರಗಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪಬ್ಲಿಕ್ ಪ್ರಾಶಿಕ್ಯೂಟರ್ ನ ಲಂಚದ ಬೇಡಿಕೆಯ ಲಿಸ್ಟ್ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರೆಂಟಿ.
ಕಲಬುರಗಿ 5 ನೇ ಜೆ.ಎಂ.ಎಫ್.ಸಿ ನ್ಯಾಯಾಲಯದ ಪಬ್ಲಿಕ್ ಪ್ರಾಶಿಕ್ಯೂಟರ್ ಸಂತೋಷ್ ಕುಮಾರ್ ಲೋಕಂಡೆ ಲೋಕಾಯುಕ್ತ ಬಲೆಗೆ ಬಿದ್ದವನು.
ನ್ಯಾಯಾಲಯಕ್ಕೆ ರಾಜಿ ಅರ್ಜಿ ಸಲ್ಲಿಸಲು ರಾಹುಲ್ ಹೈದರಾಬಾದಿ ಎನ್ನುವವರಿಂದ 10 ಸಾವಿರ ರೂಪಾಯಿ ನಗದು ಹಾಗೂ ವಿವಿಧ ಬಟ್ಟೆ ಬರೆ, ಚಪ್ಪಲಿ ಶೂಗಳನ್ನು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಅದರಂತೆ ನ್ಯಾಯಾಲಯ ಸಂಕೀರ್ಣದ ಬಳಿ ಹತ್ತು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಎ.ಪಿ.ಪಿ ಲೋಖಂಡೆ ರೆಡ್ ಹ್ಯಾಂಡ್ ಆಗಿ ಸಿಕ್ಕು ಬಿದ್ದಿದ್ದಾನೆ. ಈ ಲಂಚ ಬಾಕ ಎ.ಪಿ.ಪಿಯನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ಆದರೆ ಈ ಲಂಚ ಬಾಕ ಎಪಿಪಿ ಹಣ ಮಾತ್ರವಲ್ಲದೇ ದಿನಬಳಕೆಯ ವಸ್ತುಗಳ ಲಂಚದ ಬೇಡಿಕೆ ಬೆರಗು ಮೂಡಿಸುವಂತಿದೆ. ಅವರ ಬೇಡಿಕೆಯ ಪಟ್ಟಿ ಇಂತಿದೆ. 9 ಸೀರೆಗಳು. 4 ಶರ್ಟ್‌ಗಳು, 4 ಲಂಡನ್ ಜೀನ್ಸ್ ಪ್ಯಾಂಟ್, 1 ಜೊತೆ ಶೂ, 4 ಜೊತೆ ಮಹಿಳೆಯರ ಉಡುಗೆ, 6 ಜೋಡಿ ಮಹಿಳೆಯರ ಚಪ್ಪಲಿ ನೀಡುಬಂತೆ ಬೇಡಿಕೆ ಇಟ್ಟಿದ್ದ.
ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ
ಲೋಕಾಯುಕ್ತ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲಂಚಬಾಕ ಎ.ಪಿ.ಪಿಯನ್ನು ಅರೆಸ್ಟ್ ಮಾಡಲಾಗಿದೆ.
ಲಂಚಕ್ಕೆ ಚಪ್ಪಲಿ ಬೇಡಿಕೆ! ಲೋಕಾಯುಕ್ತ ಬಲೆಗೆ ಬಿದ್ದ ಎ.ಪಿ.ಪಿ
By Editor
July 18, 2026 3:02 AM
---Advertisement---






