ಕಲಬುರಗಿ, ಜುಲೈ 20: ಉಚಿತ ಹೊಲಿಗೆ ಯಂತ್ರ ಬೇಕೇ? ಇಂದೇ ಅರ್ಜಿ ಸಲ್ಲಿಸಿ 2026 ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ವೃತ್ತಿನಿರತ ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿಯೊಂದು ಬಂದಿದೆ.
2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಉಚಿತ ವೃತ್ತಿ ಉಪಕರಣಗಳು ಹಾಗೂ ಪೋರ್ಟೇಬಲ್ ಫ್ರೀ ಹ್ಯಾಂಡ್ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ವಿತರಿಸಲು ಜಿಲ್ಲಾ ಪಂಚಾಯತ್‌ನ ಗ್ರಾಮೀಣ ಕೈಗಾರಿಕಾ ವಿಭಾಗವು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಯೋಜನೆಯಡಿ ಧೋಬಿ ಹಾಗೂ ಕ್ಷೌರಿಕ ವೃತ್ತಿಗೆ ಅಗತ್ಯವಿರುವ ಉಚಿತ ಉಪಕರಣಗಳನ್ನು ಸಾಮಾನ್ಯ ಸೇರಿದಂತೆ ಎಲ್ಲಾ ವರ್ಗದ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ. ಅದೇ ವೇಳೆ, ಪೋರ್ಟೇಬಲ್ ಫ್ರೀ ಹ್ಯಾಂಡ್ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗದ ಫಲಾನುಭವಿಗಳಿಗೆ ಮಾತ್ರ ನೀಡಲಾಗುತ್ತದೆ.
ಈ ಯೋಜನೆಯ ಸೌಲಭ್ಯ ಪಡೆಯಲು ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದ ನಿವಾಸಿಗಳಾಗಿರಬೇಕು. ಅರ್ಜಿದಾರರು 2026ರ ಜುಲೈ 20ರ ವೇಳೆಗೆ ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು. ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಅರ್ಹ ಅಭ್ಯರ್ಥಿಗಳು ಜುಲೈ 20ರಿಂದ ಸೆಪ್ಟೆಂಬರ್ 30ರವರೆಗೆ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಅಧಿಕೃತ ವೆಬ್‌ಸೈಟ್ ಅಥವಾ kalaburagi.nic.in ವೆಬ್‌ಸೈಟ್‌ಗಳ ಮೂಲಕ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು (ಗ್ರಾಮೀಣ ಕೈಗಾರಿಕೆ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರ, 1ನೇ ಮಹಡಿ, ಎಂ.ಎಸ್.ಕೆ. ಮಿಲ್ ರಸ್ತೆ, ಜೇವರ್ಗಿ ಕ್ರಾಸ್, ಕಲಬುರಗಿ ಕಚೇರಿ ಅಥವಾ ಸಂಬಂಧಿಸಿದ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಚಿತ ಹೊಲಿಗೆ ಯಂತ್ರ ಬೇಕೇ? ಇಂದೇ ಅರ್ಜಿ ಸಲ್ಲಿಸಿ 2026
By Editor
July 22, 2026 8:34 PM
---Advertisement---





