ಕಲಬುರಗಿ ಜು.24: ಬೆಳೆ ವಿಮೆ ಪಾವತಿಗೆ ಲಾಸ್ಟ್ ಚಾನ್ಸ್ , ರೈತರೇ ಮಿಸ್ ಮಾಡ್ಕೋಬೇಡಿ. Last Chance for Crop Insurance Payment Don’t Miss Out. ಈ ವರ್ಷ ಮೊದಲೇ ಬರಗಾಲದ ಛಾಯೆ ಆವರಿಸಿದೆ. ಹಾಗಾಗಿ ಬೆಳೆ ವಿಮೆ ಮಾಡಿಸುವುದು ರೈತರಿಗೆ ಅಗತ್ಯ ಹಾಗೂ ಅನೀವಾರ್ಯವಾಗಿದೆ. ಇದುವರೆಗೆ ಬೆಳೆ ವಿಮೆ ಪ್ರಿಮಿಯಂ ಪಾವತಿಗೆ ಇರುವ ಕಾಲಾವಕಾಶ ಸಹ ಮುಗಿಯಲು ಬಂದಿದೆ. ಬೆಳೆ ವಿಮೆ ಪಾವತಿಗೆ ಲಾಸ್ಟ್ ಚಾನ್ಸ್ ಇದ್ದು, (Last Chance for Crop Insurance Payment Don’t Miss Out) ರೈತರು ಕೂಡಲೇ ಎಚ್ಚೆತ್ತುಕೊಂಡು ವಿಮೆ ಪಾವತಿಸಬೇಕಿದೆ.
ಹಾಗಾದ್ರೆ ಬೆಳೆ ವಿಮೆ ಪಾವತಿಗೆ ಕಡೆಯ ದಿನಾಂಕ ಯಾವತ್ತು ? ಯಾವ ಯಾವ ಬೆಳೆಗಳಿಗೆ ಇನ್ನೂ ಇನ್ಸುರೆನ್ಸ್ ಪ್ರಿಮಿಯಂ ಪಾವತಿಸಲು ಕಾಲಾವಕಾಶ ಇದೆ ? ಪ್ರಿಮಿಯಂ ಹಣ ಎಲ್ಲಿ ಪಾವತಿಸಬೇಕು ? ಎನ್ನುವುದರ ಪೂರ್ಣ ಮಾಹಿತಿ ಇಲ್ಲಿದೆ. ಈ ವಿವರ ಪರಿಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಪೂರ್ತಿ ಸುದ್ದಿ ಓದಿ.
2026ರ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಟಾನಗೊಳಿಸಲು ಇಂಡಸ್‍ಯಿಂಡ ಜನರಲ್ ಇನ್ಸುರೆನ್ಸ್ (IndusInd General Insurance) ವಿಮಾ ಸಂಸ್ಥೆಯನ್ನು ನಿಗದಿಪಡಿಸಲಾಗಿದೆ.
ಯಾವ ಬೆಳೆಗೆ ಯಾವ ಡೇಟ್
ಲಾಸ್ಟ್ ?
ಮುಂಗಾರು ಹಂಗಾಮಿಗೆ ತಾಲೂಕಿನ ಬೆಳೆಗಳ ವಿವರ ಹಾಗೂ ನೊಂದಣಿಗೆ ಕೊನೆಯ ದಿನಾಂಕದ ವಿವರ ಈ ಕೆಳಗಿನಂತಿದೆ. ತೊಗರಿ (ಮಳೆ ಆಶ್ರಿತ), ತೊಗರಿ (ನೀರಾವರಿ), ಹತ್ತಿ (ಮಳೆ ಆಶ್ರಿತ), ಹತ್ತಿ (ನೀರಾವರಿ), ಎಳ್ಳು (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ), ಮೆಕ್ಕೆಜೋಳ (ಮಳೆ ಆಶ್ರಿತ), ಮೆಕ್ಕೆಜೋಳ (ನೀರಾವರಿ), ಸೋಯಾಬೀನ್ (ಮಳೆ ಆಶ್ರಿತ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು 2026ರ ಜುಲೈ 31 ಕೊನೆಯ ದಿನವಾಗಿದೆ.
ಹೆಸರು (ಮಳೆ ಆಶ್ರಿತ), ಉದ್ದು (ಮಳೆ ಆಶ್ರಿತ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು 2026ರ ಜುಲೈ 15 ರಂದೇ ಕೊನೆಯ ದಿನ ಮುಗಿದು ಹೋಗಿದೆ.
read more : ಹೊಸ ಲಿಕ್ಕರ್ ಲೈಸೆನ್ಸ್ ಬೇಕೆ ? ಇ – ಹರಾಜಿನಲ್ಲಿ ಪಾಲ್ಗೊಳ್ಳಿ : ಇಲ್ಲಿದೆ ಪರಿಪೂರ್ಣ ಮಾಹಿತಿ
ಮುಂದಿನ ತಿಂಗಳವರೆಗೂ ಇದೆ
ಅದೇ ರೀತಿ ಸೂರ್ಯಕಾಂತಿ (ಮಳೆ ಆಶ್ರಿತ), ಭತ್ತ (ನೀರಾವರಿ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು 2026ರ ಆಗಸ್ಟ್ 14 ರಂದು ಕೊನೆಯ ದಿನವಾಗಿದೆ.
ಎಲ್ಲಿ ಪಾವತಿಸಬೇಕು ?
ಬೆಳೆಸಾಲ ಪಡೆಯದ ರೈತರು ನೊಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದ್ದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೋಡಿಸಿದ ಬ್ಯಾಂಕ್ ಖಾತೆ/ ಪಾಸ್‍ಬುಕ್ ಮತ್ತು ಆಧಾರ ಸಂಖ್ಯೆಯೊಂದಿಗೆ ಡಿ.ಸಿ.ಸಿ/ಇತರೆ ಬ್ಯಾಂಕ್ ಗ್ರಾಮ-ಒನ್ ಮತ್ತು ಸಿ.ಎಸ್.ಸಿ ಕೇಂದ್ರಗಳಿಗೆ ಸಂಪರ್ಕಿಸಬೇಕು.
ಯಾವ ಬೆಳೆಗೆ ಎಷ್ಟು ಪ್ರಿಮಿಯಂ ?
ಕಲಬುರಗಿ ಜಿಲ್ಲೆ – 2026-27 ಮುಂಗಾರು ಹಂಗಾಮು ಬೆಳೆ ವಿಮೆ ಯೋಜನೆಯಡಿ ಒಂದು ಎಕರೆಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ವಿವರ ಹೀಗಿದೆ.
ಪ್ರತಿ ಎಕರೆಗೆ ರೈತರ ಪ್ರೀಮಿಯಂ.
🌱 ಹೆಸರು (Green Gram) ಬೆಳೆಗೆ ಎಕರೆಗೆ ₹269.10, ಉದ್ದು (Black Gram) ಬೆಳೆಗೆ ₹265.00, ಸೋಯಾಬೀನ್ (Soybean) ಬೆಳೆಗೆ ₹331.80, ತೊಗರಿ (ಮಳೆಆಧಾರಿತ) ₹388.50, ತೊಗರಿ ನೀರಾವರಿ ಬೆಳೆಯಾಗಿದ್ದರೆ ₹406.70, ಹತ್ತಿ (ಮಳೆಆಧಾರಿತ)
₹865.70, ಹತ್ತಿ ನೀರಾವರಿ ಬೆಳೆಯಾಗಿದ್ದರೆ ₹1,492.30 ಆಗಿರುತ್ತದೆ.
ಇವು ಒಂದು ಎಕರೆಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತಗಳು.
ಅಂತಿಮ ಪ್ರೀಮಿಯಂ ಮೊತ್ತವು ನಿಮ್ಮ ಗ್ರಾಮ, ಸರ್ವೆ ಸಂಖ್ಯೆ, ಬೆಳೆ, ನೀರಾವರಿ/ಮಳೆಆಧಾರಿತ ವರ್ಗ ಮತ್ತು ಬೆಳೆ ವಿಸ್ತೀರ್ಣದ ಆಧಾರದ ಮೇಲೆ ಸ್ವಲ್ಪ ಬದಲಾಗಬಹುದು.
ಬೆಳೆ ವಿಮೆ ನೋಂದಣಿ ಮತ್ತು ಪ್ರೀಮಿಯಂ ಪಾವತಿಸಲು ಕೊನೆಯ ದಿನ: ಜುಲೈ 31, 2026. ಮರೆಯದಿರಿ.. ಇನ್ನೂ ಪ್ರೀಮಿಯಂ ಪಾವತಿಸದಿದ್ದರೆ ವಿಳಂಬ ಮಾಡದೇ ಈ ಕೂಡಲೇ ಬೆಳೆ ವಿಮೆ ಪಾವತಿಗೆ ಮುಂದಾಗಿ.
ಏನೆಲ್ಲಾ ಆದ್ರೆ ಪರಿಹಾರ ಸಿಗುತ್ತೆ
ಪ್ರಸಕ್ತ ಸಾಲು ಮತ್ತು ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಥವಾ ಸ್ಧಳ, ನಿರ್ಧಿಷ್ಟ, ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘಸ್ಪೋಟ ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಗಡ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ರೈತರು ಬೆಳೆ ವಿಮೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
Last Chance for Crop Insurance Payment Don’t Miss Out
ಎಲ್ಲಾ ರೈತರು ಉಳಿದ ಬೆಳೆಗಳ ಆಯ್ಕೆಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಹಾಗೂ ನೊಂದಣಿಗಾಗಿ ಹತ್ತಿರದ ಬ್ಯಾಂಕುಗಳಿಗೆ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಪರ್ಕಿಸಿ ಬೆಳೆ ವಿಮೆ ನೊಂದಣಿಯ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ.
ಪ್ರತಿ ಹೆಕ್ಟೇರ್‍ಗೆ ರೈತರು ಪಾವತಿಸಬೇಕಾದ ವಿಮಾ ಮೊತ್ತದ ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರು ಕಚೇರಿಯನ್ನು ಸಂಪರ್ಕಿಸಲು ಕೃಷಿ ಅಧಿಕಾರಿಗಳು ಕೋರಿದ್ದಾರೆ.






