ರೈತರಿಗೆ ಸಿಹಿ ಸುದ್ದಿ : ಸಬ್ಸಿಡಿ ಮೂಲಕ ಸೋಲಾರ ಪಂಪಸೆಟ್ ಪಡೆಯಲು ಅರ್ಜಿ ಆಹ್ವಾನ | application invitation for solar pumpset subsidy 2026 | ಅಬ್ಬಾ ! ಮಳೆಯಿಲ್ಲ.. ಬಿಸಿಲು ಮಿತಿ ಮೀರಿದೆ. ಕರೆಂಟ್ ಪದೇ ಪದೇ ಕೈ ಕೊಡುತ್ತಲೇ ಇದೆ. ಹೊಲದಲ್ಲಿನ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಲೇ ಇಲ್ಲ ಅಂತ ಗೊಣಗುತ್ತಿರುವ ರೈತರಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ಇನ್ನು ಮುಂದೆ ರೈತರು ವಿದ್ಯುತ್ ಇಲ್ಲದೆಯೇ ಬೆಳೆಗಳಿಗೆ ಅನಾಯಾಸವಾಗಿ ನೀರು ಉಣಿಸಬಹುದು. ಅದೂ ಸಹ ಕಡಿಮೆ ಖರ್ಚಿನಲ್ಲಿ ಅದು ಹೇಗೆ ಅಂತಿರಾ ? ಈ ವರದಿ ಪೂರ್ತಿ ಓದಿ.
ಸೋಲಾರ್ ಪಂಪಸೆಟ್ ಅಳವಡಿಸಿಕೊಂಡರೆ ರೈತರು ತಮ್ಮ ಬೆಳೆಗಳಿಗೆ ನೀರುಣಿಸಲು ಕರೆಂಟ್ ಗೊಡವೆಯೇ ಬೇಕಾಗಿಲ್ಲ. ಅದರೆ ಸೋಲಾರ್ ಪಂಪಸೆಟ್ ಖರೀದಿಸಲು ಸಣ್ಣ ಅತಿ ಸಣ್ಣ ರೈತರಿಗೆ ಸಾಧ್ಯವಾಗುವುದು ದುಸ್ಥರವೇ ಸರಿ. ಏಕೆಂದ್ರೆ ೩ ಲಕ್ಷ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿ ಸೋಲಾರ್ ಪಂಪಸೆಟ್ ಖರೀದಿಸುವುದು ಬಲು ಕಷ್ಟವೇ.
ರೈತರಿಗೆ ಸಿಹಿ ಸುದ್ದಿ : ಸಬ್ಸಿಡಿ ಮೂಲಕ ಸೋಲಾರ ಪಂಪಸೆಟ್ ಪಡೆಯಲು ಅರ್ಜಿ ಆಹ್ವಾನ | application invitation for solar pumpset subsidy 2026
ಹಾಗಾಗಿಯೇ ಸರಕಾರ ರೈತರಿಗೆ ಸಬ್ಸಿಡಿಯಲ್ಲಿ ಸೋಲಾರ ಪಂಪಸೆಟ್ ವಿತರಿಸುತ್ತಿದೆ. ಸಬ್ಸಿಡಿಯಲ್ಲಿ ಸೋಲಾರ್ ಪಂಪಸೆಟ್ ಖರೀದಿಸಲು ರೈತರಿಗೆ ಗರಿಷ್ಟವೆಂದರೆ ೫೦ ರಿಂದ ೮೦ ಲಕ್ಷ ರೂಪಾಯಿವರಗೆ ಮಾತ್ರ ಖರ್ಚು ಬರುತ್ತದೆ. ಅದೂ ಸಹ ಪಂಪಸೆಟ್ ನ ಹೆಚ್.ಪಿ ಮೇಲೆ ಅವಲಂಬನೆಯಾಗುತ್ತದೆ. ಇನ್ನುಳಿದ ಹಣವನ್ನು ಸರಕಾರವೇ ಸೋಲಾರ್ ಪಂಪಸೆಟ್ ಕಂಪೆನಿಗೆ ನೀಡುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯಲು ತೋಟಗಾರಿಕಾ ಇಲಾಖೆ ಮತ್ತೆ ಅರ್ಜಿ ಆಹ್ವಾನಿಸಿದೆ. ಸೋಲಾರ್ ಪಂಪಸೆಟ್ ಮಾತ್ರವಲ್ಲದೇ ಈರುಳ್ಳಿ ಶೇಖರಣಾ ಘಟಕ, ತೋಟಗಾರಿಕಾ ಬೆಳೆ ಬೆಳೆಯಲು ಪ್ಲಾಸ್ಟಿಕ್ ಮಲ್ಚಿಂಗ್ ಗೆ ಸಬ್ಸಿಡಿ ಸೇರಿದಂತೆ ವಿವಿಧ ಯೋಜನೆಗಳಿಗೆ ಸಬ್ಸಿಡಿ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಧಾನ ಮಂತ್ರ ರಾಷ್ಟ್ರೀಯೊ ವಿಕಾಸ ಯೋಜನೆ
2026-27ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರ ರಾಷ್ಟ್ರೀಯ ವಿಕಾಸ ಯೋಜನೆ-ಪ್ರತಿ ಹನಿಗೆ ಅಧಿಕೆ ಬೆಳೆ ಯೋಜನೆ. ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಮಿತಬಳಕೆಗಾಗಿ ಹನಿ ನೀರಾವರಿ ಅಳವಡಿಸಲು ಹಾಗೂ ಹೊಸ ಪ್ರದೇಶ ವಿಸ್ತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.
Read this also : ಸ್ಕಾಲರ್ಶಿಪ್ ಗಾಗಿ ಅರ್ಜಿ ಆಹ್ವಾನ-2026 : ಆನ್ ಲೈನ್ ಲಿಂಕ್ ಇಲ್ಲಿದೆ – ತಡ ಮಾಡದೇ ಅರ್ಜಿ ಹಾಕಿ | application invitation for 2026 scholarship
ಕಲಬುರಗಿ ಜಿಲ್ಲಾ ರೈತರಿಗೆ ಸಿಹಿ ಸುದ್ದಿ
ಪ್ಲಾಸ್ಟಿಕ್ ಮಲ್ಚಿಂಗ್, ಈರುಳ್ಳಿ ಶೇಖರಣಾ ಘಟಕ ಮತ್ತು ಆರ್.ಕೆ.ವಿ.ವೈ ಯೋಜನೆಯಡಿ ಈರುಳ್ಳಿ ಶೇಖರಣ ಘಟಕ ಮತ್ತು ಸೋಲಾರ ಪಂಪ್ ಸೆಟ್ ಹಾಗೂ ಇತರೆ ಕಾರ್ಯಕ್ರಮಗಳಡಿ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ. ಪಂ)ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
Read this also : ನೀರಿನ ಮೇಲೆ ಗಂಟೆಗಟ್ಟಲೇ ಯೋಗ ಮೈ ನವಿರೇಳಿಸುವ ಜಲಯೋಗಿಯ ಸಾಹಸ | Hours of yoga on the water
ಸಾಮಾನ್ಯ ವರ್ಗ, ಪರಿಶೀಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನ ನಿಗಧಿಪಡಿಸಿದ್ದು, ಇಲಾಖೆಯಿಂದ ಕಂಪನಿಗಳನ್ನು ಅನುಮೋದಿಸಲಾಗಿದ್ದು, ಅನುಮೋದಿತ ಕಂಪನಿಯವರಿಂದ ಆಸಕ್ತ ರೈತರು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಅವಕಾಶವಿರುತ್ತದೆ.
ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ/ಇಚ್ಛೆಯುಳ್ಳ ರೈತರು ಕಲಬುರಗಿ (ಜಿ.ಪಂ) ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ದೂರವಾಣಿ ಸಂಖ್ಯೆ ಕಲಬುರಗಿ 7259866723, ಪಟ್ಟಣ 9008101303, ಫರಹತಾಬಾದ 9686214111, ಅವರಾದ (ಬಿ) 9980371096, ಮಹಾಗಾಂವ 9482216912, ಕಮಲಾಪೂರ 9113058488 ಸಂಪರ್ಕಿಸಲು ಕೋರಲಾಗಿದೆ. ಕಲಬುರಗಿ ಜಿಲ್ಲೆಯ ರೈತರು ತಮಗೆ ಸಂಬಂಧಿಸಿದ ಈ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಸರಕಾರದ ಈ ಮಹತ್ವದ ಯೋಜನೆಗಳ ಲಾಭ ಪಡೆದುಕೊಳ್ಳಬಹುದು.






