ಕಲಬುರಗಿ,ಜೂ.27 : application for Navodaya school 2026 |ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ನವೋದಯ ಪ್ರವೇಶಾತಿ ಅವಧಿ ವಿಸ್ತರಣೆ |ಜಿಲ್ಲೆಯ ಕಾಳಗಿ ತಾಲೂಕಿನ ಕೋರವಾರ ಪಿ.ಎಂ.ಶ್ರೀ ಸ್ಕೂಲ್ ಜವಾಹರ ನವೋದಯ ವಿದ್ಯಾಲಯ ಕಲಬುರಗಿ-2 ಇಲ್ಲಿ 2026-27ನೇ ಸಾಲಿನ 11ನೇ ತರಗತಿ (ವಿಜ್ಞಾನ ವಿಭಾಗ) ಪ್ರವೇಶಾತಿಗೆ ಖಾಲಿ ಉಳಿದ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ.
ಶೈಕ್ಷಣಿಕ ವರ್ಷ 2025-26ನೇ ಸಾಲಿನಲ್ಲಿ ಸರಕಾರಿ ಮತ್ತು ಸರಕಾರದಿಂದ ಮಾನ್ಯತೆ ಪಡೆದ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದಿರುವ ಕೋರವಾರ ನವೋದಯ ವಿದ್ಯಾಲಯಕ್ಕೆ ಒಳಪಡುವ ಚಿಂಚೋಳಿ, ಚಿತ್ತಾಪೂರ ಹಾಗೂ ಸೇಡಂ ತಾಲೂಕಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
application for Navodaya school
ಅರ್ಜಿ ಸಲ್ಲಿಸಲು ಈ ಮುಂಚೆ ಜೂನ್ 25 ಕೊನೆ ದಿನವಾಗಿತ್ತು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿದೆ. ಪ್ರವೇಶಾತಿಗೆ ಮೊದಲು ಬಂದವರಿಗೆ ಆದ್ಯತೆ ಕೊಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕೆಂದು ಶಾಲೆಯ ಪ್ರಭಾರಿ ಪ್ರಾಂಶುಪಾಲ ಎಸ್.ಎಚ್.ದಾಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read more : Application for anganvadi worker post|ಅಂಗನವಾಡಿ ವರ್ಕರ್ ಆಗಿ ಕೆಲಸ ಮಾಡುವ ಆಸಕ್ತಿಯೇ ? ಅವಕಾಶ ಇಲ್ಲಿದೆ
2025-26ನೇ ಸಾಲಿನಲ್ಲಿ ಶೇ.60 ಅಂಕ ಪಡೆದ(ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ) ವಿಜ್ಞಾನ ವಿಭಾಗಕ್ಕೆ ಸೇರ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸೀಟುಗಳ ಹಂಚಿಕೆಯನ್ನು ಶೇಕಡವಾರು ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8951741851, 9743278559, 9701197201 ಹಾಗೂ ಜವಾಹರ ನವೋದಯ ವಿದ್ಯಾಲಯ ಕೋರವಾರ ಶಾಲೆಯನ್ನು ಸಂಪರ್ಕಿಸಬಹುದಾಗಿದೆ.






