ಬಿಸಿ ಬಿಸಿ ಸುದ್ದಿ ಕೃಷಿ ಪಂಡಿತರು ಸರ್ಕಾರಿ ಯೋಜನೆಗಳು ಸಾಧಕರ ಹೆಜ್ಜೆ ಗುರುತು ನಮ್ಮೂರ ಸೊಬಗು

ಪಿ.ಎಂ. ಕಿಸಾನ್ ಯೋಜನೆಗೆ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯ

Published on: Friday, September 4, 2026 10:02 PM
Last Updated on: Friday, September 4, 2026 10:02 PM
biometroc e kyc is still mandatory for pm kisan scheem

ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಬೇಕಾದರೆ ರೈತರು ಇನ್ನು ಮುಂದೆ ಕಡ್ಡಾಯವಾಗಿ ಬಯೋಮೆಟ್ರಿಕ್ ಆಧಾರಿತ ಇಲ್ಲವೇ ಮುಖ ದೃಢೀಕರಣ ಆಧಾರಿತ (biometroc e kyc is still mandatory for pm kisan scheem Sep-2026) ಇ -ಕೆ ವೈ ಸಿ ಮಾಡಿಸುವುದು ಕಡ್ಡಾಯವಾಗಿದೆ.

ಪಿ.ಎಂ. ಕಿಸಾನ್ ಯೋಜನೆಯ ಅರ್ಹ ಫಲಾನುಭವಿ ರೈತರಿಗೆ ಈಗಿನಿಂದಲೇ ಇದು ಕಡ್ಡಾಯವಾಗಿದ್ದು, ರೈತರು ಬಯೋಮೆಟ್ರಿಕ್ ಸಹಿತ ಅಥವಾ ಫೇಸ್ ಡಿಟೆಕ್ಷನ್ ಆಧಾರಿತ ಕೆ ವೈ ಸಿ ಪೂರ್ಣಗೊಳಿಸದಿದ್ದರೆ ಮುಂದಿನ ತಿಂಗಳಿಂದ ಪಿಎಂ ಕಿಸಾನ್ ಯೋಜನೆಯ ಹಣವೇ ರೈತರಿಗೆ ಬರುವುದಿಲ್ಲ.

ಪಿ.ಎಂ. ಕಿಸಾನ್ ಯೋಜನೆಗೆ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯ

ಆದ್ದರಿಂದ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ ಕೂಡಲೇ ಬಯೋಮೆಟ್ರಿಕ್ ಸಹಿತ ಅಥವಾ ಫೇಸ್ ಡಿಟೆಕ್ಷನ್ ಆಧಾರಿತ ಕೆ ವೈ ಸಿ ಮಾಡಿಸಿಕೊಳ್ಳಿ ಎಂದು ಕಲ್ಬುರ್ಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್ ರೈತರಿಗೆ ಮನವಿ ಮಾಡಿಕೊಂಡಿದ್ದಾರೆ.

ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯು ಕೆವೈಸಿ ಮಾಡಿಸಿಕೊಳ್ಳಬಹುದು ಇಲ್ಲದಿದ್ದರೆ ರೈತರು ತಮ್ಮ ಮೊಬೈಲ್ ಗಳಲ್ಲಿ ಪಿ.ಎಂ.ಕಿಸಾನ್ ಮೊಬೈಲ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಂಡು, ಮುಖ ದೃಢೀಕರಣ ಮಾಡಿ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ತಿಳಿಸಿದ್ದಾರೆ.

Read this also : RSS ಪಥಸಂಚನದಲ್ಲಿ ಭಾಗಿಯಾದ ಶಿಕ್ಷಕರಿಗೆ ಬಿಗ್ ರಿಲೀಫ್ | ಅಮಾನತ್ತು ಆದೇಶಕ್ಕೆ KAT ತಡೆಯಾಜ್ಞೆ

ದುರುಪಯೋಗ ತಡೆಯಲು ಈ ಕ್ರಮ

ಈ ಯೋಜನೆಯಡಿ ನಕಲಿ ಫಲಾನುಭವಿಗಳನ್ನು ತಡೆಯಲು, ಮೃತರನ್ನು ಪಟ್ಟಿಯಿಂದ ಕೈಬಿಟ್ಟು, ಅರ್ಹ ರೈತರಿಗೆ ಪಾರದರ್ಶಕವಾಗಿ ಹಣ ಜಮೆ ಮಾಡಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಆಧಾರ್ ಓಟಿಪಿ ಆಧಾರಿತ ಇ-ಕೆವೈಸಿಯಿಂದಾಗಿ ಮೃತಪಟ್ಟವರ ಖಾತೆಗಳಿಗೂ ಹಣ ವರ್ಗಾವಣೆಯಾಗುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದರಿಂದ, ಕೇಂದ್ರ ಸರ್ಕಾರವು ಓಟಿಪಿ ವ್ಯವಸ್ಥೆ ರದ್ದುಗೊಳಿಸಿ, ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿಗೆ ಮಾತ್ರ ಅವಕಾಶ ನೀಡಿದೆ. ಪ್ರತಿ ಫಲಾನುಭವಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿದ್ದರೂ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿ ಮಾಡಬೇಕಿದೆ.

Read this also : ರೈತರಿಗೆ ಮಧ್ಯಂತರ ಪರಿಹಾರ 18 ಕೋಟಿ ರೂ. ಶೀಘ್ರ ಮಂಜೂರು | 8 crore crop insurance quickly sanctioned

ಇನ್ನೂ 1,99,067 ರೈತರ ಇ-ಕೆವೈಸಿ” ಬಾಕಿ

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1,99,067 ರೈತರ ಇ-ಕೆವೈಸಿ” ಬಾಕಿ ಇದೆ. (ಅಫಜಲಪೂರ-26786, ಆಳಂದ-31954, ಚಿಂಚೋಳಿ-19324, ಚಿತ್ತಾಪೂರ-17097, ಕಲಬುರಗಿ-18418, ಕಾಳಗಿ-13792, ಕಮಲಾಪೂರ-11156, ಜೇವರ್ಗಿ-21056, ಸೇಡಂ-20621, ಶಹಾಬಾದ-3364 ಹಾಗೂ ಯಡ್ರಾಮಿ-15499) ಹಾಗಾಗಿ ರೈತರು ಕೂಡಲೇ ಬಯೋಮೆಟ್ರಿಕ್ ಆಧಾರಿತ ಇಲ್ಲವೇ ಫೇಸ್ ಡಿಟೆಕ್ಷನ್ ಆಧಾರಿತ kyc ಪೂರ್ಣಗೊಳಿಸುವಂತೆ ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿ ಸುವಂತೆ ಕಲ್ಬುರ್ಗಿ ಜಿಲ್ಲಾಧಿಕಾರಿ ಪತ್ರಿಕಾ ಹೇಳಿಕೆ ಮೂಲಕ ರೈತರಿಗೆ ಮನವಿ ಮಾಡಿಕೊಂಡಿದ್ದಾರೆ.

ಮೊಬೈಲ್ ಮೂಲಕ ಹೇಗೆ ಮಾಡಬಹುದು ?

ಹೌದು ! ರೈತರು, ತಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ತಾವೇ ಈ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದ್ದರೆ ಈ ಕೆಳಗೆ ನೀಡಿರುವ ಮಾಹಿತಿ ಆಧರಿಸಿ ಮಾಡಬಹುದು.
Play Store – PM-KISAN

Aadhaar Face RD: Google Play Store – AadhaarFaceRD⁠

ಮೊದಲು ಎರಡೂ apps install ಮಾಡಿ, ನಂತರ PM-KISAN Appನಲ್ಲಿ Face e-KYC ಪ್ರಕ್ರಿಯೆ ಆರಂಭಿಸಿ.

Join WhatsApp

Join Now

Join Telegram

Join Now