ಕಲಬುರಗಿ : ಪೂಜ್ಯ ಡಾ.ಶರಣಬಸವಪ್ಪ ಅಪ್ಪ ( Dr Sharanabasappa Appa) ಅವರು ಕಲ್ಯಾಣ ಕರ್ನಾಟಕದ ನೆಲದಲ್ಲಿ ಜನಪದ ಸಂಸ್ಕೃತಿಯನ್ನು ಸಂರಕ್ಷಣೆಗೆ ಪ್ರೋತ್ಸಾಹಕ್ಕೆ ನೀಡಿದ್ದರು ಎಂದು ಗೋದುತಾಯಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಡಾ.ಗಂಗಾ ಪೂಜಾರ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಜನಪದ ಸಂಸ್ಕೃತಿಗೆ ಡಾ. ಅಪ್ಪ ಪ್ರೋತ್ಸಾಹ ಅಪಾರ ( Dr Sharanabasappa Appa) ಅವರು ಮತ್ತು ಜನಪದ ಸಂಸ್ಕೃತಿ ದಾಸೋಹ ಕುರಿತು ಮಾತನಾಡಿ, ಜನಪದ ಸಂಸ್ಕೃತಿಯ ದಾಸೋಹ ಎಂದರೆ ಜನರಿಂದ ಬಂದಿರುವ ಸಾಂಸ್ಕೃತಿಕ ಸಂಪತ್ತನ್ನು ಸಂರಕ್ಷಿಸಿ, ಅದನ್ನು ಸಮಾಜಕ್ಕೆ ಹಂಚಿ, ಹೊಸ ತಲೆಮಾರಿಗೆ ಪರಿಚಯಿಸುವ ಕಾರ್ಯ ಎಂದರು.
ಜನಪದ ಸಂಸ್ಕೃತಿಗೆ Dr Sharanabasappa Appa ಪ್ರೋತ್ಸಾಹ ಅಪಾರ
ಜನಪದ ಸಂಸ್ಕೃತಿ ಯಾವುದೇ ಒಂದು ವ್ಯಕ್ತಿ ಅಥವಾ ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ಅದು ಜನರ ಬದುಕಿನಿಂದ ಹುಟ್ಟಿ, ಜನರಿಂದಲೇ ಬೆಳೆದು ಬಂದ ಸಂಸ್ಕೃತಿ. ಜನಪದ ಸಾಹಿತ್ಯವು ಜನರ ಜೀವಾನುಭವಗಳ ಭಂಡಾರ, ಗಾದೆಗಳು, ಒಗಟುಗಳು, ಜನಪದ ಕಥೆಗಳು, ಹಾಡುಗಳು ಮತ್ತು ವಚನ ಪರಂಪರೆಯಂತಹ ಸಾಹಿತ್ಯ ರೂಪಗಳ ಮೂಲಕ ಜೀವನ ಮೌಲ್ಯ, ನೀತಿ, ಜ್ಞಾನ ಮತ್ತು ಅನುಭವಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ತಲುಪಿಸಲಾಗುತ್ತದೆ ಎಂದು ಅವರು ಹೇಳಿದರು.
Read this also : BJP Protest in Kalburagi : ಬೈಕ್ ಸವಾರನ ಹೆಲ್ಮೆಟ್ ನೆಲಕ್ಕೆಸೆದು ತೇಲ್ಕೂರ ಆಕ್ರೋಶ
ಉತ್ತರ ಕರ್ನಾಟಕದ ಜನಜೀವನದಲ್ಲಿ ತತ್ವಪದ, ಜನಪದ ಗೀತೆ, ಭಜನೆ, ಲಾವಣಿ, ಗೀಗೀ ಪದ, ಡೊಳ್ಳು ಕುಣಿತ, ನಾಟಕ, ಕಥನ ಪರಂಪರೆ ಜೋಗುಳ ಹಾಡು, ಮದುವೆ ಹಾಡು ಮುಂತಾದ ಅನೇಕ ಕಲೆಗಳಿಗೆ ಪೂಜ್ಯರು ಪ್ರೊತ್ಸಾಹ ನೀಡಿದ್ದರು. ಕಾಯಕ, ದಾಸೋಹ, ಸಮಾನತೆ, ಭಕ್ತಿ, ಸತ್ಯ, ಸರಳತೆ ಮತ್ತು ಮಾನವೀಯತೆ ಮುಂತಾದ ಮೌಲ್ಯಗಳು ಜನಪದ ಹಾಡುಗಳು ಮತ್ತು ಕಥೆಗಳ ಮೂಲಕ ಜನರಿಗೆ ತಲುಪಿಸಿದರು.ಅವರ ದಾಸೋಹ ಸೂತ್ರಗಳಲ್ಲಿ ಜನಪದ ಸಂಸ್ಕೃತಿ ಎದ್ದು ಕಾಣುತ್ತದೆ. ಜನಪದ ಸಂಸ್ಕೃತಿಗೆ ಪೂಜ್ಯ ಅಪ್ಪ ಅವರ ಜೀವನದುದ್ದಕ್ಕೂ ಕಂಡು ಬರುತ್ತದೆ. ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅವರು ಗೌರವಿಸುತ್ತಿದ್ದರು. ಜನಪದ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿದ್ದರು ಹಾಗೂ ಅವರ ಕಲೆಗೆ ಸೂಕ್ತ ವೇದಿಕೆ ನೀಡಿದ್ದರು ಎಂದು ಹೇಳಿದರು. dr-sharanabasappa-appa








