ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

ಕಲಬುರಗಿ ಜಿಲ್ಲೆಗೆ 585.72 ಕೋಟಿ ರೂ. ಬೆಳೆ ವಿಮೆ ಪರಿಹಾರ | kalaburagi crop insurance 585 crore

August 6, 2026 5:03 AM
---Advertisement---

ಕಲಬುರಗಿ ಜಿಲ್ಲೆಗೆ 585.72 ಕೋಟಿ ರೂ. ಬೆಳೆ ವಿಮೆ ಪರಿಹಾರ | kalaburagi crop insurance 585 crore |

ಕಲಬುರಗಿ ಜು. 6 : ಬೆಳೆ ಹಾನಿಗೊಳಗಾದ ಕಲಬುರಗಿ ಜಿಲ್ಲೆಯ ರೈತರಿಗೆ ರಾಜ್ಯ ಸರಕಾರ 585.72 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಿದೆ.

2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 3,00,952 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಸರ್ಕಾರದಿಂದ ರೂ 585.72 ಕೋಟಿ‌ಬೆಳೆ ವಿಮೆ ಪರಿಹಾರ ಮಂಜೂರಾಗಿದೆ. ಇದರಲ್ಲಿ 2,87,696 ರೈತರಿಗೆ ಒಟ್ಟು 243.52 ಕೋಟಿ ಬೆಳೆ ವಿಮೆ ಪರಿಹಾರದ ಮೊದಲನೆಯ ಕಂತನ್ನು ಈಗಾಗಲೆ ಜಮೆ ಮಾಡಲಾಗಿದೆ (ಬೆಳೆ ಮಧ್ಯಂತರ ಪರಿಹಾರ- (Mid-Season Adversity).

kalaburagi crop insurance 585 crore

ಜಿಲ್ಲೆಯ 2,67,133 ರೈತರಿಗೆ ರೂ 234.73 ಕೋಟಿ ಹಾಗೂ ಸ್ಥಳೀಯ ವಿಕೋಪದಡಿ (Localized calamity) 20,563 ರೈತರಿಗೆ ರೂ 8.79 ಕೋಟಿ‌ ಜಮೆ ಸಹ ಆಗಿದೆ.

ಎರಡನೆಯ ಕಂತು

ರೂ 221 ಕೋಟಿ ಅನುದಾನ ರೂ ಪೈಕಿ 54 ಕೋಟಿ ಬಿಡುಗಡೆಯಾಗಿದ್ದು ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗಲಿದೆ.

ಬಾಕಿ ಮೊತ್ತ

ಇನ್ನುಳಿದ ರೂ 67 ಕೋಟಿ ರೂಪಾಯಿ ಇನ್ನೂ ಸರಕಾರದಿಂದ ಬರಬೇಕಿದೆ.

ಈ ಮಾಹಿತಿ ನಿಮಗಾಗಿ ಕ್ಲಿಕ್ ಮಾಡಿ : ಅತೃಪ್ತ ಶಾಸಕರಿಗೆ ಸಿಎಂ ಶಾಕ್ ! ರಾಜೀನಾಮೆ ನೀಡಿದರೆ ತಕ್ಷಣ ಅಂಗೀಕಾರ | CM warns unsatisfied MLA’s

ಬೆಳೆ ಹಾನಿ ಪರಿಹಾರ

2025-26 ನೇ ಸಾಲಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ಅತಿವೃಷ್ಟಿಯಿಂದ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು

ಹಾಗೆ, ಬೆಳೆ ಹಾನಿಯಾದ 3,26,183 ರೈತರಿಗೆ ಒಟ್ಟು ರೂ 498.73 ಕೋಟಿ ಬೆಳೆ ಹಾನಿ ಪರಿಹಾರವನ್ನು DBT (ನೇರ ನಗದು ವರ್ಗಾವಣೆ) ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.

ಪರಿಹಾರ ಹಣ ಸಹ ಜಮಾ

ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ರೂ 250 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನಡಿ (STATE TOPUP) ರೂ 248.73 ಕೋಟಿ ಬೆಳೆ ಹಾನಿ ಪರಿಹಾರ ಜಮೆಯಾಗಿದೆ.

ಕಲಬುರಗಿ ಜಿಲ್ಲೆಯ ರೈತರಿಗೆ 2025-26 ನೇ ಸಾಲಿನಲ್ಲಿ ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ರೂ 250 ಕೋಟಿ, ರಾಜ್ಯ ಸರ್ಕಾರದ ವಿಶೇಷ ಪ್ಯಾಕೇಜ್ ನಡಿ ರೂ 248.73 ಕೋಟಿ ಹಾಗೂ ಬೆಳೆ ವಿಮೆ ಪರಿಹಾರವಾಗಿ ರೂ 585.72 ಕೋಟಿ ಹೀಗೆ ಒಟ್ಟು ರೂ 1084.45 ಪರಿಹಾರ ಬಿಡುಗಡೆ ಆದಂತಾಗಿದೆ.

ಕಲಬುರಗಿ ಜಿಲ್ಲೆಗೆ 585.72 ಕೋಟಿ ರೂ. ಬೆಳೆ ವಿಮೆ ಪರಿಹಾರ | kalaburagi crop insurance 585 crore

WhatsApp

Join Now

Telegram

Join Now

Leave a Comment