ಬೈಕ್ ಪಲ್ಟಿ ಪ್ರಾಣ ಬಿಟ್ಟ ಮೂವರು ಪ್ರಾಣ ಸ್ನೇಹಿತರು |Three friends died in th accident |ಕಲಬುರಗಿ ಜು.13: ಆಯ ತಪ್ಪಿ ಬೈಕ್ ರಸ್ತೆ ಬದಿಯ ಕಂದಕಕ್ಕೆ ಬಿದ್ದ ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ಮೂವರು ಸ್ನೇಹಿತರು ಸ್ಥಳದಲ್ಲೇ ಸಾವಿಗೀಡಾದ ಧಾರುಣ ಘಟನೆ ಕಲಬುರಗಿ ತಾಲೂಕಿನ ಪಾಣೆಗಾಂವ್ ತಾಂಡಾ ಬಳಿ ಸಂಭವಿಸಿದೆ.
Three friends died in th accident
ಧರ್ಮು ತಂದೆ ರಾಜು ಚವಾಣ (31), ಅನಿಲ ತಂದೆ ಗೋಪಾಲ ಪವರ್ (34), ಸುಂದರ ತಂದೆ ಹರಿಶ್ಚಂದ್ರ ರಾಠೋಡ್ (32) ಮೃತ ಸ್ನೇಹಿತರು.
ಪಾಣೆಗಾಂವ್ ತಾಂಡಾದ ಈ ಮೂವರು ಸ್ನೇಹಿತರು ಕಲಬುರಗಿಗೆ ತೆರಳಿದ್ದರು. ಮಧ್ಯರಾತ್ರಿ 12 ಗಂಟೆಗೆ ಸುಮಾರಿಗೆ ಮೂವರೂ ಜೊತೆಯಾಗಿ ಒಂದೇ ಬೈಕ್ ಮೇಲೆ ತಮ್ಮ ಊರು ಪಾಣೆಗಾಂವ್ ಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ವೇಗವಾಗಿ ಹೊರಟಿದ್ದ ಬೈಕ್ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಕ್ಕದಲ್ಲಿನ ಕಂದಕಕ್ಕೆ ಹೋಗಿ ಬಿದ್ದಿದೆ ಎನ್ನಲಾಗಿದೆ. ಆ ಕಂದಕದಲ್ಲಿಯೇ ಬಿದ್ದು ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಥವಾ ಅಪರಿಚಿತ ವಾಹನ ಯಾವುದಾದ್ರೂ ಡಿಕ್ಕಿ ಹೊಡೆದಿರಬಹುದಾ ಎನ್ನುವ ಅನುಮಾನ ಸಹ ಇದ್ದು ಆ ಬಗ್ಗೆಯೂ ಪೊಲೀಸ್ ತನಿಖೆ ನಡೆಯುತ್ತಿದೆ.
Read this also : S Janaki family life|ಸ್ವರ ಸರಸ್ವತಿ ಎಸ್.ಜಾನಕಿ ಕೌಟುಂಬಿಕ ಹಿನ್ನಲೆ
ಒಂದೇ ಗ್ರಾಮದ ಮೂವರು ಯುವಕರು ಪ್ರಾಣ ಕಳೆದುಕೊಂಡ ಕಾರಣ ಪಾಣೆಗಾಂವ್ ತಾಂಡಾದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಲಬುರಗಿ ನಗರದ ಸಂಚಾರಿ ಪೊಲೀಸ್ ಠಾಣೆ ಒಂದರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.




