ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

S Janaki family life|ಎಸ್.ಜಾನಕಿ ಕೌಟುಂಬಿಕ ಹಿನ್ನಲೆ

August 6, 2026 9:36 AM
S janaki and Husband Ramprasad photo
---Advertisement---

ಸ್ವರ ಸರಸ್ವತಿ ಎಸ್.ಜಾನಕಿ ಕೌಟುಂಬಿಕ ಹಿನ್ನಲೆ|S Janaki family life |( ಎಸ್.ಜಾನಕಿ ಫ್ಯಾಮಿಲಿ ) ಕುರಿತ ಮಾಹಿತಿ ಬಹುತೇಕರಿಗೆ ಇಲ್ಲ. ಅವರು ನಮ್ಮನ್ನು ಅಗಲಿದ ಈ ಸಂದರ್ಭದಲ್ಲಿ ಅವರ ಫ್ಯಾಮಿಲಿ ಲೈಫ್‌ ಬಗ್ಗೆ ಒಂದಿಷ್ಟು ಮಾಹಿತಿ.

ಸ್ವರ ಮಾಂತ್ರಿಕ, ಗಾನ ಕೋಗಿಲೆ ಎಸ್.ಜಾನಕಿ ಹೆಸರು ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡಿಗರಿಗೆ ಚಿರಪರಿಚಿತವಾಗಿರುವ ಹೆಸರು ಮತ್ತು ಸ್ವರ ಎಸ್.ಜಾನಕಿ ಅವರದ್ದು. ಒಂದಲ್ಲಾ ಎರಡಲ್ಲಾ ಬರೋಬ್ಬರಿ ನಲವತ್ತೆಂಟು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದ್ವನಿಯಾದ ಅದ್ವಿತಿಯ ಗಾಯಕಿ‌ ಎಸ್.ಜಾನಕಿ ಇನ್ನಿಲ್ಲ. ಜಾನಕಿ ಅವರು ನಿನ್ನೆ ದೈವಾದೀನವಾಗಿದ್ದಾರೆ. ಈಗಲೂ ಬಹಳಷ್ಟು ಜನರಿಗೆ ಎಸ್.ಜಾನಕಿ ಅವರ ವಯಕ್ತಿಯ ಮಾಹಿತಿಗಳಿಲ್ಲ. ನಮ್ಮ “ಧರ್ಮದ ದಾರಿ” ಓದುಗರ ಅಪೇಕ್ಷೆಗೆ ಅನುಗುಣವಾಗಿ ಎಸ್.ಜಾನಕಿ ಅವರ ಕೌಟುಂಬಿಕ ಹಿನ್ನಲೆ‌, ತಮ್ಮ ಮುಂದಿಡುವ ಪ್ರಯತ್ನ ನಮ್ಮದು.

ಎಸ್.ಜಾನಕಿ. ಮೂಲತಃ ಆಂದ್ರಪ್ರದೇಶದವರು

ಎಸ್.ಜಾನಕಿ. ಮೂಲತಃ ಇವರು ಆಂದ್ರಪ್ರದೇಶದವರು. ಗುಂಟೂರು ಜಿಲ್ಲೆಯ ರೇಪಲ್ಲಾ ತಾಲೂಕಿನ ಪಲ್ಲಪಟ್ಲ ಎನ್ನುವ ಗ್ರಾಮದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಇವರು ಜನಿಸಿದ್ದು 1938 ರ ಎಪ್ರೀಲ್ 23 ರಂದು. ಇವರ ತಂದೆ ಶ್ರೀರಾಮಮೂರ್ತಿ ಶಾಲಾ ಶಿಕ್ಷಕರಾಗಿದ್ದವರು.

ಶಿಕ್ಷಕ ತಂದೆಯ ಗರಡಿಯಲ್ಲಿ ಶಿಸ್ತಿನಿಂದ ಬೆಳೆದ ಜಾನಕಿ ಅವರಿಗೆ ಬಾಲ್ಯದಿಂದಲೇ ಸಂಗೀತ ಆಸಕ್ತಿದಾಯಕವಾಗಿತ್ತು. ಆದ್ರೆ ಇವರ ಕೌಟುಂಬಿಕ ಹಿನ್ನಲೆ ನೋಡಿದಾಗ ಇವರದ್ದೇನೂ ದೊಡ್ಡ ಸಂಗೀತ ವಿದ್ವಾಂಸರ ಕುಟುಂಬವಾಗಿರಲಿಲ್ಲ. ಒಬ್ಬ ಶಾಲಾ ಶಿಕ್ಷಕನ ಕುಟುಂಬವಷ್ಟೇ ಇವರದ್ದಾಗಿತ್ತು.

Read this also : ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ | Crop insurance payment due in few days only

ಮೂರನೇ ವಯಸ್ಸಿನಿಂದಲೇ ಹಾಡು ಶುರು

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಬಾಲ್ಯದಿಂದ ಅಂದ್ರೆ ಮೂರನೇ ವಯಸ್ಸಿನಿಂದಲೇ ಹಾಡುವುದನ್ನು ಶುರು ಮಾಡಿದ್ದರು ಜಾನಕಿ. ನಂತರ ಇವರ ತಂದೆಯವರು ಜಾನಕಿಯ ಸಂಗೀತ ಪ್ರತಿಭೆ ಹಾಗೂ ಆಸಕ್ತಿ ಗುರುತಿಸಿ, ಆಗಿನ ಕಾಲದ ಖ್ಯಾತ ಸಂಗೀತ ವಿದ್ವಾಂಸರಾಗಿದ್ದ ಪೈಡಿಸ್ವಾಮಿ ಹಾಗೂ ವಾರಣಾಸಿ ಬಾಲರಾಮಯ್ಯ ಅವರ ಬಳಿ ಸಂಗೀತ ಕಲಿಕೆಗೆ ಕಳುಹಿಸುತ್ತಾರೆ. ಜಾನಕಿ ಅವರ ಸಂಗೀತದ ಆಸಕ್ತಿ ಅವರ ಕೋಗಿಲೆಯ ಕಂಠ ಗುರುತಿಸಿದ ಗುರುಗಳು, ಆಗಲೇ ಜಾನಕಿ ಅವರಿಗೆ ನಮ್ಮನ್ನೂ ಮೀರಿಸುವ ಶಕ್ತಿ ನಿನ್ನಲ್ಲಿದೆ ಎಂದಿದ್ದರಂತೆ. ಮುಂದೆ ಗುರುಗಳ ಮಾತು ಅಕ್ಷರಶಃ ನಿಜವಾಗಿಸಿದವರು ಎಸ್.ಜಾನಕಿ

Read this also : ಕಲಬುರಗಿಯಲ್ಲಿ ಭೂಕಂಪ | Earthquake in Kalaburagi

ಸ್ವರ ಸರಸ್ವತಿ ಎಸ್.ಜಾನಕಿ ಕೌಟುಂಬಿಕ ಹಿನ್ನಲೆ |S Janaki family life

ಎಸ್.ಜಾನಕಿ ಅವರು, ವಯಸ್ಸಿಗೆ ಬಂದ ನಂತರ ಅವರ ಕುಟುಂಬಸ್ಥರು ಮದುವೆಗೆ ಮುಂದಾಗ್ತಾರೆ. 1959 ರಲ್ಲಿ ವಿ.ರಾಮಪ್ರಸಾದ ಎನ್ನುವವರೊಂದಿಗೆ ಜಾನಕಿ ಅವರ ವಿವಾಹ ನಡೆಯುತ್ತದೆ. ವಿವಾಹದ ನಂತರವೂ ಜಾನಕಿ ಅವರ ಸಂಗೀತ ಆಸಕ್ತಿ ಮುಂದುವರೆಯುತ್ತದೆ. ಆಗಂತೂ ಜಾನಕಿ ಅವರು ಸಿನೇಮಾ ಹಾಡುಗಳ ಮೂಲಕ ಮನೆ ಮಾತಾಗಿರುತ್ತಾರೆ.

ಪತಿ ಸಂಪೂರ್ಣ ಬೆಂಬಲ

ಮದುವೆಯ ನಂತರ ಜಾನಕಿ ಅವರಿಗೆ ಡಬಲ್ ಜವಾಬ್ದಾರಿ. ಒಂದೆಡೆ ಕುಟುಂಬ ನಿರ್ವಹಣೆ. ಇನ್ನೊಂದೆಡೆ ಸಂಗೀತ ಪ್ರಾಧಾನ್ಯತೆ. ಎರಡನ್ನೂ ಸರಿ ಸಮಾನವಾಗಿ ಸರಿದೂಗಿಸಿಕೊಂಡು ಬಂದವರು‌ ಎಸ್.ಜಾನಕಿ. ಇದಕ್ಕೆ ಸಾಕ್ಷಿಯಾಗಿ ಅವರಿಗೆ ಒಂದು ಗಂಡು ಮಗುವಾಗುತ್ತದೆ‌. ತಾಯಿ ಜಾನಕಿ ಹಾಗೂ ತಂದೆ ವಿ.ರಾಮಪ್ರಸಾದ ಅವರು ತಮ್ಮ‌ ಮಗುವಿಗೆ ಮರುಳಿ ಕೃಷ್ಣ ಎನ್ನುವ ಹೆಸರಿಡುತ್ತಾರೆ.

1971 ರಲ್ಲಿ ಪತಿ ಅಗಲಿಕೆ

ಮುಂದೆ ಎಸ್.ಜಾನಕಿ ಅವರ ಹೆಸರು ಮತ್ತಷ್ಟು ಮಗದಷ್ಟು ಹೆಚ್ಚುತ್ತದೆ. ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಬಹು ಬೇಡಿಕೆಯ ಗಾಯಕಿಯಾಗುತ್ತಾರೆ ಎಸ್ ಜಾನಕಿ. ಆದ್ರೆ ಇದೇ ವೇಳೆ ಅವರ ವಯಕ್ತಿಕ ಬದುಕಿನಲ್ಲಿ ದೊಡ್ಡ ಅಘಾತವೊಂದು ನಡೆದೇ ಬಿಡುತ್ತದೆ. 1971 ರಲ್ಲಿ ಅವರ ಪತಿ ವಿ.ರಾಮಪ್ರಸಾದ್ ವಿಧಿವಶರಾಗುತ್ತಾರೆ. ಪತಿ ಅಗಲಿಕೆಯ ನಂತರ ಸ್ವಲ್ಪ ದಿನ ಮೌನವಾಗಿದ್ದ ಜಾನಕಿ ಅವರನ್ನು ಆಪ್ತರು ಮತ್ತೆ ಸಂಗೀತ ಲೋಕದಲ್ಲಿ ಬ್ಯೂಜಿ ಆಗುವಂತೆ ಮಾಡುತ್ತಾರೆ. ಅವರ ಬೇಡಿಕೆ ಸಹ ಆಗ ಮತ್ತಷ್ಟು ಹೆಚ್ಚುತ್ತದೆ.

ಮಗ ಸಹ ವಿಧಿವಶ

ಜಾನಕಿ ಅವರ ಬಾಳಿನಲ್ಲಿ ಒಂದೊಂದೇ ದುರಂತಗಳು ನಡೆದು ಬಿಡುತ್ತವೆ. ಅತ್ತ ಗಂಡ ವಿಧಿವಶನಾದ ಬಳಿಕ ಮಗನ ಮುಖ ನೋಡಿ ಜೀವಿಸುತ್ತಿದ್ದರು. ಆದ್ರೆ ಇತ್ತಿಚಿಗಷ್ಟೇ ಅಂದ್ರೆ ಇದೇ 2026 ರ ಜನೇವರಿಯಲ್ಲಿ ಅವರ ಮಗ ನಿಧನರಾದ ನಂತರ ಜಾನಕಿ ಅವರು ತೀವ್ರ ನೊಂದಿದ್ದರು. ಮಗನ ಅಗಲಿಕೆ ಇಳಿವಯಸ್ಸಿನಲ್ಲಿ ಅವರನ್ನು ತೀವ್ರ ದುಃಖಕ್ಕೆ ಈಡು ಮಾಡಿತ್ತು. ಬಹುಶಃ ಈ ಕೊರಗಿನಲ್ಲಿಯೇ ಮಗ ವಿಧಿವಶನಾದ 6 ತಿಂಗಳಲ್ಲಿಯೇ ಎಸ್.ಜಾನಕಿ ಅವರೂ ಸಹ ನಮ್ಮೆಲ್ಲರನ್ನು ಅಗಲಿದ್ದಾರೆ.

ಜಾನಕಿ ಅವರು ನಾದ ಸ್ವರ ನಿಂತಿರಬಹುದು. ಅವರ ಉಸಿರು ಇಲ್ಲವಾಗಿರಬಹುದು. ಅವರ ದೇಹ ಮಣ್ಣು ಸೇರುತ್ತಿರಬಹುದು. ಆದ್ರೆ ಕೋಟ್ಯಾಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಎಸ್.ಜಾನಕಿ ಯಾವತ್ತೂ ಅಮರರೇ. ಅವರು ಹಾಡಿದ ಬಗೆ ಬಗೆಯ ಹಾಡುಗಳು ಅವರನ್ನೂ ಈಗಲೂ, ಮುಂದೆಯೂ, ಎಂದೆಂದಿಗೂ ಅಮರವಾಗಿಸಿದೆ. ಎಸ್..! ಜಾನಕಿ ಯಾವತ್ತೂ ಅಮರ.. ಅಮರ.. ಅಮರ..

ಸ್ವರ ಸರಸ್ವತಿ ಎಸ್.ಜಾನಕಿ ಕೌಟುಂಬಿಕ ಹಿನ್ನಲೆ | S Janaki family life

WhatsApp

Join Now

Telegram

Join Now

Leave a Comment