ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

Kalaburagi court blast threat|RDX ಬಳಸಿ ಕಲಬುರಗಿ ಕೋರ್ಟ್ ಸ್ಪೋಟದ ಬೆದರಿಕೆ : ವ್ಯಾಪಕ ತಪಾಸಣೆ

July 30, 2026 2:25 PM
Kalaburagi court blast threat
---Advertisement---

ಧರ್ಮದ ದಾರಿ ವಾರ್ತೆ
ಕಲಬುರಗಿ ಜು.6:- Kalaburagi court blast threat|RDX ಬಳಸಿ ಕಲಬುರಗಿ ಕೋರ್ಟ್ ಸ್ಪೋಟದ ಬೆದರಿಕೆ : ವ್ಯಾಪಕ ತಪಾಸಣೆ | ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ನಾಲ್ಕು RDX ಸ್ಪೋಟಕ ಇಡಲಾಗಿದೆ. ಮಧ್ಯಾಹ್ನದ ಒಳಗೆ ಇವು ಸ್ಪೋಟಗೊಳ್ಳಲಿವೆ ಎನ್ನುವ ಬೆದರಿಕೆಯ ಸಂದೇಶ ಜಿಲ್ಲಾ ನ್ಯಾಯಾಲಯಕ್ಕೆ ಇಂದು ಬಂದಿದೆ. ಇ – ಮೇಲ್ ಮೂಲಕ ಈ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ, ಕಲಬುರಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Kalaburagi court blast threat | ಸಿಎಂ ಆಗಮಿಸುವ ದಿನವೇ ಬೆದರಿಕೆ

ಇತ್ತ ಬೀದರ್ ನ ಬಸವಕಲ್ಯಾಣದಿಂದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ರಾತ್ರಿ ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಮೊದಲೇ ಕಟ್ಟ ಎಚ್ಚರದಲ್ಲಿದ್ದರು. ಈ ಬೆದರಿಕೆ ಸಂದೇಶ ಬಂದ ನಂತರ, ಪೊಲೀಸರ ತಂಡ ಕ್ಷಣವೂ ತಡ ಮಾಡದೇ ನ್ಯಾಯಾಲಯದ ಆವರಣ ನುಗ್ಗಿತು. ಪೊಲೀಸ್ ಸಿಬ್ಬಂದಿಗಳು, ಬಾಂಬ್ ನಿಷ್ಕ್ರಿಯ ದಳದವರು, ಮೆಟಲ್ ಡಿಟೆಕ್ಟರ್ ಟೀಂನವರು ನ್ಯಾಯಾಲಯದ ಮೂಲೆ ಮೂಲೆಗಳಲ್ಲಿಯೂ ಸುತ್ತಾಡಿ ತೀವ್ರ ತಪಾಸಣೆ ನಡೆಸಿದರು.

ಸಿಟಿ ಪೊಲೀಸ್ ಕಮಿಷನರ್ ದೌಡು

ಕಲಬುರಗಿ ಜಿಲ್ಲಾ ನ್ಯಾಯಾಲಯ ಸ್ಪೋಟ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಅವರು, ಜಿಲ್ಲಾ ನ್ಯಾಯಾಲಯಕ್ಕೆ ದೌಡಾಯಿಸಿದರು. ನ್ಯಾಯಾಲಯದ ಮೂಲೆ ಮೂಲೆಗಳಲ್ಲೂ ತೀವ್ರ ತಪಾಸಣೆ ನಡೆಸಿ, ಯಾವುದೇ ಕಾರಣಕ್ಕೂ ನಿರ್ಲಕ್ಷ ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Read more : An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್‌ ಕೊರತೆ | ಸಂಪೂರ್ಣ ಪ್ರವಾಸ ಕಥನ

ಹುಸಿ ಬೆದರಿಕೆ ಕರೆ ಎಂದ ಕಮೀಷನರ್

ತಪಾಸಣೆ ಎಲ್ಲಾ ಪೂರ್ಣಗೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕಮಿಷನರ್ ಡಾ. ಶರಣಪ್ಪ ಎಸ್.ಡಿ, ಎಲ್ಲೆಡೆಯೂ ತಪಾಸಣೆ ನಡೆಸಿದ್ದೇವೆ. ಯಾವುದೇ ರೀತಿಯ ಸ್ಪೋಟಕ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಇದು ಒಂದು ಹುಸಿ ಬಾಂಬ್ ಕರೆಯಾಗಿದೆ. ಯಾರೂ ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದರು.

ಕಿಡಿಗೇಡಿಗಳ ಪತ್ತೆಗೆ ಕ್ರಮ

ಈ ರೀತಿ ಬಾಂಬ್ ಸ್ಫೋಟಿಸುವ ಹುಸಿ ಬೆದರಿಕೆ ಸಂದೇಶ ನೀಡುವ ಮೂಲಕ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿರುವ ಕಿಡಿಗೇಡಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್ ಡಿ ತಿಳಿಸಿದರು. ಈ ಇ- ಮೇಲ್ ಸಂದೇಶ ತಮಿಳುನಾಡು ಮೂಲದ್ದು ಎನ್ನುವುದು ಗೊತ್ತಾಗಿದೆ. ತಮಿಳುನಾಡು ಜೈಲಿನಲ್ಲಿರುವ ಇಬ್ಬರು ಪೋಕ್ಸೋ ಕೇಸ್ ನ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಇ-ಮೇಲ್ ಸಂದೇಶದಲ್ಲಿ ಬೇಡಿಕೆ ಇಡಲಾಗಿದೆ. ಅವರು ಯಾರು ಎನ್ನುವುದು ಪತ್ತೆ ಹಚ್ಚಿ ಅರೆಸ್ಟ್ ಮಾಡಲಾಗುವುದು ಎಂದು ಅವರು ತಿಳಿಸಿದರು.

ಇಂದು ರಾತ್ರಿ ಕಲಬುರಗಿಗೆ ಸಿಎಂ ಡಿ.ಕೆ ಶಿವಕುಮಾರ್ ಆಗಮಿಸುತ್ತಿದ್ದಾರೆ. ಸದ್ಯ ಬಸವಕಲ್ಯಾಣದಲ್ಲಿರುವ ಸಿಎಂ, ರಾತ್ರಿ ಕಲಬುರಗಿಗೆ ಬಂದು ವಾತ್ಸವ್ಯ ಮಾಡಲಿದ್ದಾರೆ. ಈ ದಿನವೇ ಕಲ್ಬುರ್ಗಿಯಲ್ಲಿ ಆರ್.ಡಿ.ಎಕ್ಸ್ ಸ್ಫೋಟದ ಬೆದರಿಕೆ ಸಂದೇಶ ಬಂದಿರುವುದು, ಪೊಲೀಸರಿಗೂ ಸಹ ತೀವ್ರ ತಲೆ ನೋವಾಗಿ ಪರಿಣಮಿಸಿತ್ತು. ಆದರೆ ಇದು ಹುಸಿ ಬಾಂಬ್ ಕರೆ ಎನ್ನುವುದು ದೃಢವಾದ ನಂತರ ಪೊಲೀಸರು ನಿರಳರಾದರು.

Kalaburagi court blast threat|RDX ಬಳಸಿ ಕಲಬುರಗಿ ಕೋರ್ಟ್ ಸ್ಪೋಟದ ಬೆದರಿಕೆ : ವ್ಯಾಪಕ ತಪಾಸಣೆ July 2026

Kalaburagi court blast threat|RDX ಬಳಸಿ ಕಲಬುರಗಿ ಕೋರ್ಟ್ ಸ್ಪೋಟದ ಬೆದರಿಕೆ : ವ್ಯಾಪಕ ತಪಾಸಣೆ July 2026

WhatsApp

Join Now

Telegram

Join Now

Leave a Comment