ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

CM Temple run in Kalaburagi|ಕಲಬುರಗಿಯಲ್ಲಿ ಸಿಎಂ ಟೆಂಪಲ್ ರನ್

July 30, 2026 2:33 PM
---Advertisement---

CM Temple run in Kalaburagi|ಕಲಬುರಗಿಯಲ್ಲಿ ಸಿಎಂ ಟೆಂಪಲ್ ರನ್ | ಕಲಬುರಗಿ ಜು.7: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಸಿಎಂ ಆದ ನಂತರ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿದ್ದು, ಕಲಬುರಗಿಯಲ್ಲಿ ಟೆಂಪಲ್ ರನ್ ಶುರು ಮಾಡಿದ್ದಾರೆ.

CM Temple run in Kalaburagi|ಕಲಬುರಗಿಯಲ್ಲಿ ಸಿಎಂ ಟೆಂಪಲ್ ರನ್

ಕಲಬುರಗಿಯ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ, ಶರಣಬಸವೇಶ್ವರ ಕರ್ತು ಗದ್ದುಗೆಗೆ ನಮಿಸಿದರು. ನಂತರ ಅವರು ಶರಣಬಸವೇಶ್ವರ ಮಹಾದಾಸೋಹ ಮನೆಗೆ ಭೇಟಿ ನೀಡಿದರು. ಮಹಾದಾಸೋಹ ಮನೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ 9 ನೇ ಹಾಗೂ ಹಾಲಿ ಪೀಠಾಧಿಪತಿ ಚಿರಂಜಿವಿ ದೊಡ್ಡಪ್ಪ ಅಪ್ಪ ಅವರು ಸಿಎಂ ಅವರನ್ನು ಬರ ಮಾಡಿಕೊಂಡರಲ್ಲದೇ, ಅವರಿಗೆ ಆಶೀರ್ವಾದ ರೂಪದಲ್ಲಿ ತೆಂಗಿನ ಕಾಯಿ ನೀಡಿದರು.

ಡಿಸಿಎಂ ಜಿ ಪರಮೇಶ್ವರ, ಸಚಿವರಾದ ಪ್ರೀಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ್, ಇನ್ನಿತರರು ಸಿಎಂ ಜೊತೆಗಿದ್ದು ಶರಣಬಸವೇಶ್ವರ ಕರ್ತು ಗದ್ದುಗೆಯ ದರ್ಶನ ಪಡೆದರು.

ಖಾಜಾ ಬಂದೇಜ್ ದರ್ಗಾಕೂ ಭೇಟಿ

ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿಯ ನಂತರ ಸಿಎಂ ಅವರು ಕಲಬುರಗಿಯ ಇನ್ನೊಂದು ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿರುವ ಖ್ವಾಜಾ ಬಂದೇ ನವಾಜ್ ದರ್ಗಾಕೆ ಭೇಟಿ ನೀಡಿದರು. ಬಂದೇ ನವಾಜ್ ದರ್ಗಾದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಚಿವ ಯು.ಟಿ.ಖಾದರ್, ದರ್ಗಾದ ಅಧ್ಯಕ್ಷ ಡಾ. ಸೈಯದ್ ಮೊಮ್ಮದ್ ಹಫೀಜ್ ಅವರು ಸಿಎಂ ಅವರನ್ನು ದರ್ಗಾಕೆ ಸ್ವಾಗತಿಸಿ ಬರಮಾಡಿಕೊಂಡರು.
ಸಿಎಂ ಡಿ.ಕೆ.ಶಿವಕುಮಾರ್ ಗೆ ಡಿಸಿಎಂ ಪರಮೇಶ್ವರ, ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ್ ಸೇರಿ ಹಲವು ಮುಖಂಡರು ಸಾಥ್ ನೀಡಿದರು.

Read more : Kalaburagi court blast threat|RDX ಬಳಸಿ ಕಲಬುರಗಿ ಕೋರ್ಟ್ ಸ್ಪೋಟದ ಬೆದರಿಕೆ : ವ್ಯಾಪಕ ತಪಾಸಣೆ


ಇದಕ್ಕೂ ಮೊದಲು ಮುಖ್ಯಮಂತ್ರಿಯವರು ಕಲಬುರಗಿ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಕಲಬುರಗಿ ಯಲ್ಲಿ ಮಳೆಯಿಲ್ಲ. ಬರಗಾಲದ ಛಾಯೆ ಆವರಿಸಿದೆ.‌ ಸರಕಾರ ಕೂಡಲೇ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಹಲವರು ಮನವಿ ಪತ್ರ ಸಲ್ಲಿಸಿದರು.

ಕೋಲಿ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂದು ಮನವಿ ಸಲ್ಲಿಸಿದ ಹಲವರು, ಸಿದ್ರಾಮಯ್ಯ ಬರೀ ಭರವಸೆ ಕೊಟ್ಟರೆ ಹೊರತು ಕೆಲಸ ಮಾಡಲಿಲ್ಲ. ನೀವಾದ್ರೂ ಮಾಡಿ. ನಮ್ಮ ಮಕ್ಕಳು ಸವಲತ್ತಿಲ್ಲದೇ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಸಿಎಂ ಮಾತ್ರ ಸಮಾಧಾನದಿಂದ ಮನವಿ ಆಲಿಸಿ ಪರಿಶೀಲಿಸುವ ಭರವಸೆ ನೀಡಿದರು.

WhatsApp

Join Now

Telegram

Join Now

Leave a Comment