ಕಲಬುರಗಿ ಜು.14: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ನಟೋರಿಯಸ್ ಕೈದಿಗಳು ಪರಾರಿಯಾಗಿದ್ದಾರೆ. ಬಾತ್ ರೂಮ್ ಗ್ರಿಲ್ ಮುರಿದು ಜೈಲು ಬ್ಯಾರೆಕ್ ನಿಂದ ಹೊರ ಬಂದಿರುವ ಕೈದಿಗಳು ನಂತರ ಏಣಿ ಬಳಸಿ ಗೋಡೆ ಹತ್ತಿ ಅಲ್ಲಿಂದ ಬಟ್ಟೆ ಕಟ್ಟಿ ಕೆಳಗಡೆ ಇಳಿದು ಪರಾರಿಯಾಗಿದ್ದಾರೆ.
ಸಂತೋಷ, ಸಾಗರ ಮತ್ತು ಮಸ್ತಾನ್ ಎನ್ನುವ ಮೂವರು ಎಸ್ಕೆಪ್ ಆದ ಕೈದಿಗಳು. ಈ ಮೂವರೂ ಕೈದಿಗಳಲ್ಲಿ ಇಬ್ಬರು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದವರಾಗಿದ್ದಾರೆ. ಇನ್ನೊಬ್ಬ ಪೋಕ್ಸೋ ಕೇಸ್ ನಲ್ಲಿ 20 ವರ್ಷ ಸಜಾಗೆ ಒಳಗಾದವನು.
ಈ ಮೂವರೂ ಕೈದಿಗಳು ಬ್ಯಾರೆಕ್ ನಂಬರ್ 5 ರಲ್ಲಿ ಇದ್ದವರು. ಮೂವರೂ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಜೈಲಿನಿಂದ ಪರಾರಿಯಾಗಿದ್ದಾರೆ. ಮೊದಲು ಬಾತರೂಮನ ಗ್ರಿಲ್ ಕತ್ತರಿಸಿ ಬ್ಯಾರೆಕ್ ನಿಂದ ಈ ಮೂವರು ಕೈದಿಗಳು ಹೊರಗಡೆ ಬಂದಿದ್ದಾರೆ. ಜೈಲಿನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಸಾಕಷ್ಟು ಮಟಿರಿಯಲ್ ಜೊತೆಗೆ ಒಂದು ಏಣಿ ಸಹ ಇಡಲಾಗಿತ್ತು. ಆ ಏಣಿ ಹೊರಗಡೆ ಇಟ್ಟು ಹೋಗಿದ್ದೂ ಸಹ ಅನುಮಾನಕ್ಕೆ ಕಾರಣವಾಗಿದೆ. ಈ ಏಣಿ ಬಳಸಿಕೊಂಡು ಹಿಂಬದಿಯ ಗೋಡೆ ಹತ್ತಿರುವ ಈ ಮೂವರು ಕೈದಿಗಳು, ಅಲ್ಲಿ ಗೋಡೆಯ ಮೇಲ್ಗಡೆಯ ವಿದ್ಯುತ್ ತಂತಿಯ ಕಂಬಕ್ಕೆ ಬಟ್ಟೆ ಕಟ್ಟಿ ಅದನ್ನು ಹಿಡಿದು ಕೆಳಗಡೆ ಹಾರಿ ಹೋಗಿದ್ದಾರೆ. ಅವರು ಹಾರಿ ಪರಾರಿಯಾಗಿ ಹೋಗಿರುವ ಸ್ಥಳದಲ್ಲಿ ಗೋಡೆಗೆ ಬಟ್ಟೆ ಕಟ್ಟಿರುವುದು ಈಗಲೂ ಕಣಬಹುದಾಗಿದೆ. ಈ ರೀತಿ ಜೈಲಿನ ಭದ್ರಕೋಟೆಯಿಂದ ಹೊರಹಡೆ ಹಾರಿದ ಕೈದಿಗಳನ್ನು ಕರೆದುಕೊಂಡು ಹೋಗಲು ಹಿಂಬದಿಯ ರಸ್ತೆಯಲ್ಲಿ ಕಾರ್ ವೊಂದು ಸಿದ್ದವಾಗಿ ನಿಂತಿತ್ತು. ಆ ಕಾರ್ ನಲ್ಲಿಯೇ ಈ ಕೈದಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಇವರು ಪರಾರಿಯಾಗಲು ಸಾಕಷ್ಟು ದಿನಗಳ ಹಿಂದಿನಿಂದ ತಯಾರಿ ನಡೆಸಿದ್ದರು ಎನ್ನುವುದು ಗೊತ್ತಾಗುತ್ತಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಅವರು ಕಲಬುರಗಿ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ತಪ್ಪಿಸಿಕೊಂಡಿರುವ ಈ ಕೈದಿಗಳ ಪತ್ತೆಗೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.
ಈ ನಟೋರಯಸ್ ಕೈದಿಗಳ ಗುರುತು ಅಥವಾ ಸುಳಿವು ಸಿಕ್ಕರೆ ಕೂಡಲೇ ಥಮ್ ಲೈನ್ ನಲ್ಲಿರುವ ಪೊಲೀಸ್ ಅಧಿಕಾರಿಗಳ ನಂಬರಗೆ ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ.
ಕಲಬುರಗಿ ಜೈಲಿಂದ ಮೂವರು ನಟೋರಿಯಸ್ ಕೈದಿಗಳು ಎಸ್ಕೆಪ್ : ಸುಳಿವು ಸಿಕ್ಕರೆ ಈ ನಂಬರಗೆ ಕರೆ ಮಾಡಿ
By Editor
July 15, 2026 1:55 AM
---Advertisement---





