ಮುಧೋಳ ಶಾಸಕನಿಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಕಲಬುರಗಿಯಲ್ಲಿ ಪ್ರತಿಭಟನೆ | Protest in Kalaburagi for Minister seat | ಕಲಬುರಗಿ ಆ 4:- ರಾಜ್ಯ ಸಚಿವ ಸಂಪುಟ ವಿಸ್ತರಣೆ ನಂತರ ಹಲವೆಡೆ ಅಸಮಾಧಾನ, ಆಕ್ರೋಶ ತೋವ್ರಗೊಂಡಿವೆ. ಸರಕಾರದ ವಿರುದ್ದ ಸ್ವ ಪಕ್ಷದ ಕಾರ್ಯಕರ್ತರಿಂದಲೇ ಪ್ರತಿಭಟನೆಗಳೂ ಸಹ ನಡೆಯುತ್ತಿವೆ.

ಅದೇ ರೀತಿ ಬಾಗಲಕೋಟೆ ಜಿಲ್ಲೆಯ ಮುಧೋಳ ಮತಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಅಬಕಾರಿ ಸಚಿವ ಆರ್.ಬಿ ತಿಮ್ಮಾಪೂರ ಅವರಿಗೆ ಮಂತ್ರಿಸ್ಥಾನ ಕೈ ತಪ್ಪಿದ್ದಕ್ಕೆ ಕಲಬುರಗಿಯಲ್ಲಿ ಪ್ರತಿಭಟನೆ ನಡೆದಿದೆ.
ಮುಧೋಳ ಶಾಸಕನಿಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಕಲಬುರಗಿಯಲ್ಲಿ ಪ್ರತಿಭಟನೆ | Protest in Kalaburagi for Minister seat
ಮಾದಿಗ ಸಮುದಾಯದವರಿಂದ ಕಲಬುರಗಿ ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆದಿದೆ. ಮಾದಿಗ ಸಮುದಾಯದ ಮುಖಂಡರೂ ಮಾಜಿ ಸಚಿವರಾದ ಆರ್.ಬಿ ತಿಮ್ಮಾಪೂರ ಅವರಿಗೆ ಮಂತ್ರಿ ಸ್ಥಾನ ನೀಡಬೇಕಿತ್ತು.
ಆರ್.ಬಿ ತಿಮ್ಮಾಪೂರ ಅವರು ಕಳೆದ ಬಾರಿ ಸಿದ್ರಾಮಯ್ಯ ಸರಕಾರದಲ್ಲಿ ನೀಡಲಾಗಿದ್ದ ಅಬಕಾರಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ದಕ್ಷ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಎಲ್ಲಿಯೂ ಕಿಂಚಿತ್ತೂ ಕಪ್ಪು ಚುಕ್ಕೆ ಹಚ್ಚಿಕೊಳ್ಳದೇ ಅತ್ಯಂತ ಪ್ರಾಮಾಣಿಕತೆಯಿಂದ ದುಡಿದಿದ್ದಾರೆ.
ಮುಖ್ಯಮಂತ್ರಿ ವಿರುದ್ದ ದಿಕ್ಕಾರದ ಘೋಷಣೆ
ಅಂತಹ ಆರ್.ಬಿ ತಿಮ್ಮಾಪೂರ ಅವರನ್ನು ನಿರ್ಲಕ್ಷಿಸುವ ಮೂಲಕ ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹಾಗೂ ಹೈಕಮಾಂಡ್ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಿಎಂ ಹಾಗೂ ಕಾಂಗ್ರೆಸ್ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ದಿಕ್ಕಾರದ ಘೋಷಣೆಗಳು ಮೊಳಗಿದವು. ಪ್ರತಿಭಟನಾಕಾರರು ಟಯರ್ ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮಾದಿಗ ಸಮುದಾಯದ ಹಲವಾರು ಮುಖಂಡರು, ಆರ್.ಬಿ ತಿಮ್ಮಾಪೂರ ಅವರ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




