RSS ಬ್ಯಾನ್ ಗೆ ಆಗ್ರಹಿಸಿ ಪ್ರತಿಭಟನೆ | Protest for RSS Ban | ಕಲಬುರಗಿ ಜೂ.26:- ಗೃಹ ಸಚಿವ ಪ್ರೀಯಾಂಕ್ ಖರ್ಗೆ ಅವರ RSS ವಿರುದ್ದದ ಸಮರ ತೀವ್ರಗೊಳ್ಳುತ್ತಿರುವ ಬೆನ್ನಲ್ಲೆ, ಇತ್ತ ಅವರ ಸ್ವ-ಜಿಲ್ಲೆ ಕಲಬುರಗಿಯಲ್ಲಿ RSS ನಿಷೇಧಕ್ಕೆ ಆಗ್ರಹಿಸಿ ಹೋರಾಟ ಶುರುವಾಗಿದೆ.
ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಮಲ್ಲಪ್ಪ ಹೊಸಮನಿ ನೇತೃತ್ವದಲ್ಲಿ ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು ಕಲಬುರಗಿಯಲ್ಲಿ RSS ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಗಳ ಕಾರ್ಯಕರ್ತರು, RSS ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವರು RSS ನೋಂದಣಿ ಕೇಳಿದ್ದಾರೆ. ಅದರಲ್ಲಿ ತಪ್ಪೆನಿದೆ ? ನೋಂದಣಿ ಕೇಳಿದರೆ ಅವರು, ಬಿಜೆಪಿಯ ಮುಖಂಡರ ಮೂಲಕ ಗೃಹ ಸಚಿವ ಪ್ರೀಯಾಂಕ್ ಖರ್ಗೆ ವಿರುದ್ಧ ವಯಕ್ತಿಕವಾಗಿ, ಹಗುರವಾಗಿ ಮಾತನಾಡಿಸುತ್ತಿದ್ದಾರೆ. ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ, ರಮೇಶ ಜಿಗಜಿಣಗಿ ಮೂಲಕ ಮಾತನಾಡಿಸುತ್ತಿದ್ದಾರೆ.
RSS ಬ್ಯಾನ್ ಗೆ ಆಗ್ರಹಿಸಿ ಪ್ರತಿಭಟನೆ | Protest for RSS Ban
ತಾನೂ ಒಬ್ಬ ದಲಿತನಾಗಿ ರಮೇಶ ಜಿಗಜಣಗಿ, ಗೃಹ ಸಚಿವ ಪ್ರೀಯಾಂಕ್ ಖರ್ಗೆ ವಿರುದ್ದ ಮನಬಂದಂತೆ ಮಾತನಾಡುತ್ತಿದ್ದಾರೆ. ಅಂತವರ ವಿರುದ್ದ ಕ್ರಮ ಆಗಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
Read this also : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಕಲಬುರಗಿಯಲ್ಲಿ ಮತ್ತೊಂದು ಬೃಹತ್ ಉದ್ಯೋಗ ಮೇಳ | huge job fair at kalaburagi
ಈ ವಿಚಾರದಲ್ಲಿ ಸಿಎಂ ಡಿ.ಕೆ ಶಿವಕುಮಾರ ಅವರು ಮೌನ ಮುರಿಯಬೇಕು. ಗೃಹ ಸಚಿವ ಪ್ರೀಯಾಂಕ್ ಖರ್ಗೆ ಅವರ ಬೆಂಬಲಕ್ಕೆ ನಿಲ್ಲಬೇಕು. ಅದೇ ರೀತಿ ನೋಂದಣಿ ಇಲ್ಲದ RSS ಸಂಘಟನೆಯನ್ನು ರಾಜ್ಯದಲ್ಲಿ ಸಂಪೂರ್ಣ ಬ್ಯಾನ್ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯದಲ್ಲಿ ಯಾವುದೇ ಗಲಭೆಗಳು ನಡೆಯಲಿ, ಪ್ರಗತಿಪರ ಚಿಂತಕರ ಕೊಲೆಗಳು ನಡೆಯಲಿ. ಆ ಬಗ್ಗೆ RSS ನವರು ಚಕಾರ ಎತ್ತುವುದಿಲ್ಲ. ಅವರ ಸಂಘದಲ್ಲಿದ್ದರು ಯಾರು ಎನ್ನುವುದರ ಮಾಹಿತೇ ಸಿಗೋದಿಲ್ಲ. ಕಾರಣ ಅವರ ಸಂಘಟನೆ ನೊಂದಣಿಯೇ ಆಗಿಲ್ಲ. ಹೀಗೆ ನೋಂದಣಿಯೇ ಇಲ್ಲದ ಸಂಘ ಅಸ್ತಿತ್ವದಲ್ಲಿ ಇರುವುದೇ ತಪ್ಪು. ಸಿಎಂ ಡಿ.ಕೆ ಶಿವಕುಮಾರ ಈ ಕೂಡಲೇ ಎಚ್ಚೆತ್ತುಕೊಂಡು ರಾಜ್ಯದಲ್ಲಿ RSS ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಲ್ಲಪ್ಪ ಹೊಸಮನಿ ಆಗ್ರಹಿಸಿದರು.




