ಕಲಬುರಗಿ ಜೂ.26: ಕಲಬುರಗಿಯಿಂದ ಈ ಬಾರಿ ಅಮರನಾಥ ಯಾತ್ರೆಗೆ ಹೊರಡುವವರಿಗಾಗಿ ಇಂದು (ಜೂ.26 ರಂದು) ವಿಶೇಷ ಪೂರ್ವ ಸಿದ್ದತಾ ಸಭೆ ಏರ್ಪಡಿಸಲಾಗಿದೆ. ಕಲಬುರಗಿಯ ಶ್ರೀ ಅಮರನಾಥ ಯಾತ್ರಾ ಟ್ರಸ್ಟ್ ಈ ಸಭೆ ಏರ್ಪಡಿಸಿದ್ದು,ಇಂದು ಬೆಳಿಗ್ಗೆ 11-30 ಕ್ಕೆ ಕಲಬುರ್ಗಿಯ ಶ್ರೀ ರಾಮತೀರ್ಥ ದೇವಸ್ಥಾನದಲ್ಲಿ ವಿಶೇಷ ಪೂರ್ವ ಸಿದ್ದತಾ ಸಭೆ ನಡೆಯಲಿದೆ.
ಸಭೆಯ ಉದ್ದೇಶ ಏನು ?
ಅಮರನಾಥ ಯಾತ್ರೆಗೆ ಕಲಬುರಗಿಯಿಂದ ಹೊರಡುತ್ತಿರುವವರಿಗೆ ಯಾತ್ರೆಯ ವೇಳೆ ಯಾವುದೇ ರೀತಿ ಅನಾನುಕೂಲ ಆಗಬಾರದು. ಆರೋಗ್ಯ, ಭದ್ರತೆ, ಅನುಮತಿ ವಿಚಾರದಲ್ಲಿ ಅಡಚಣೆ ಆಗಬಾರದು ಎನ್ನುವ ಉದ್ದೇಶದಿಂದ ಯಾತ್ರಾರ್ಥಿಗಳಿಗೆ ವಿವರ ಮಾಹಿತಿ ನೀಡುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ.
ಸಭೆ ಎಲ್ಲಿ ? ಎಷ್ಟೊತ್ತಿಗೆ ?
ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಅಲ್ಲಿನ ಬೌಗೋಳಿಕ ವಾತಾವರಣಕ್ಕೆ ಅನುಗುಣವಾಗಿ ಯಾರ್ತಾರ್ಥಿಗಳು ಯಾವ ರೀತಿ ಸಿದ್ದತೆಯಲ್ಲಿರಬೇಕು ? ಎನ್ನುವುದರ ಪೂರ್ಣ ಮಾಹಿತಿ ಇಂದಿನ ಪೂರ್ವ ಸಿದ್ದತಾ ಸಭೆಯಲ್ಲಿ ವಿವರಿಸಲಾಗುತ್ತದೆ. ಯಾತ್ರೆಯ ವೇಳೆ ಯಾರ್ಥಾರ್ಥಿಗಳು ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳು ಏನೇನು ? ಯಾತ್ರೆಯ ಸಮಯದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು ಹೇಗಿರಬೇಕು ? ತಂಗುವ ವ್ಯವಸ್ಥೆ, ಭದ್ರತಾ ಶಿಷ್ಠಾಚಾರ ಹೇಗಿರಬೇಕು ?
ಕಾಲ್ನಡಿಗೆ ಆಗದವರಿಗೆ ಪರ್ಯಾಯ ವ್ಯವಸ್ಥೆಗಳು ಏನಿವೆ ? ಯಾವ ರೀತಿಯ ಉಡುಪು ಸೂಕ್ತ ? ಎಲ್ಲವನ್ನೂ ಹಿರಿಯರು, ಅನುಭವಿಗಳೂ ಆಗಿರುವ ಶ್ರೀ ಅಮರನಾಥ ಯಾತ್ರಾ ಟ್ರಸ್ಟ್ ಅಧ್ಯಕ್ಷರು ವಿವರಿಸಲಿದ್ದಾರೆ.
ಕಿಟ್ ಪಡೆಯುವುದು ಮರೆಯದಿರಿ
ಅಲ್ಲದೇ ಯಾತ್ರಾರ್ಥಿಗಳಿಗೆ ಯಾತ್ರಾ ಪರವಾನಗಿ ಮತ್ತು ಯಾತ್ರಾ ಕಿಟ್ ಸಹ ವಿತರಿಸಲಾಗುತ್ತದೆ. ಹಾಗಾಗಿ ಯಾತ್ರಾರ್ಥಿಗಳು ಎಲ್ಲರೂ ಕಲಬುರಗಿ ನಗರದ ರಾಮತೀರ್ಥ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 11-30 ಗಂಟೆಗೆ ನಡೆಯುವ ಪೂರ್ವ ಸಿದ್ದತಾ ಸಭೆಗೆ ತಪ್ಪದೇ ಆಗಮಿಸುವಂತೆ ಕಲಬುರಗಿಯ ಶ್ರೀ ಅಮರನಾಥ ಯಾತ್ರಾ ಟ್ರಸ್ಟ್ ಕೋರಿದೆ.






