ಸೇಡಂ ಜೂ.24: ಬಿಸಿಎಂ ಹಾಸ್ಟೇಲ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ. 19 ವರ್ಷದ ಚಂದ್ರೀಕಾ ಎನ್ನುವ ವಿದ್ಯಾರ್ಥಿನಿಯೇ ಆತ್ಮಹತ್ಯೆ ಮಾಡಿಕೊಂಡವಳು.
ಸೇಡಂ ತಾಲೂಕಿನ .. ಗ್ರಾಮದ ಚಂದ್ರಿಕಾ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದವಳು. ಸೇಡಂ ಪಟ್ಟಣದ ಬಿಸಿಎಂ ಹಾಸ್ಟೇಲ್ ನಲ್ಲಿ ವಾಸವಾಗಿದ್ದಳು. ಆದ್ರೆ ಗೆಳತಿಯರಾರೂ ಇಲ್ಲದೇ ವೇಳೆ ಏಕಾ ಏಕಿ ತನ್ನ ಕೋಣೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ಗೊತ್ತಾಗಿ ಹಾಸ್ಟೇಲ್ ನ ಇತರೇ ವಿದ್ಯಾರ್ಥಿನಿಯರು ಭಯ ಭೀತರಾಗಿದ್ದಾರೆ. ಸ್ಥಳಕ್ಕೆ ಸೇಡಂ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಗ್ಯ ವಿಚಾರಕ್ಕಾಗಿ ತೀವ್ರ ನೊಂದಿದ್ದಳು. ಇದೇ ಆತ್ಮಹತ್ಯೆ ಗೆ ಕಾರಣ ಎನ್ನಲಾಗಿದೆ. ಅದಾಗ್ಯೂ ಆತ್ಮಹತ್ಯೆಗೆ ನಿಖರ ಕಾರಣ ಏನು ಎನ್ನುವುದು ಮಾತ್ರ ಇನ್ನೂ ಗೊತ್ತಾಗಿಲ್ಲ.
---Advertisement---





