ಮಾವನ ಆಸ್ತಿ ಅತ್ತೆಗೆ ವರ್ಗಾವಣೆ ಮಾಡಲು ಲಂಚಕ್ಕೆ ಬೇಡಿಕೆ ಗ್ರಾಪಂ ಕಾರ್ಯದರ್ಶಿ ಅರೆಸ್ಟ್ | Lokayukta trap in Kalaburagi | ಕಲಬುರಗಿ 4 : ಮಾವನ ಆಸ್ತಿ ಅತ್ತೆಗೆ ವರ್ಗಾವಣೆ ಮಾಡಲು ಲಂಚಕ್ಕೆ ಬೇಡಿಕೆ, ಗ್ರಾ.ಪಂ ಕಾರ್ಯದರ್ಶಿ ಲೋಕಾ ಬಲೆಗೆ ಬಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಮಾವ ನಿಧನರಾದ ಕಾರಣ ಅವರ ಹೆಸರಿನ ಆಸ್ತಿ ಅತ್ತೆಯ ಹೆಸರಿಗೆ ವರ್ಗಾವಣೆ ಮಾಡಲು ಅಳಿಯ ಪ್ರಯತ್ನಿಸುತ್ತಿದ್ದ. ಆಗ ಅಳಿಯನ ಬಳಿ 10 ಸಾವಿರ ರೂಪಾಯಿ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಲ್ಲದೇ ಅದನ್ನು ಪಡೆಯುತ್ತಿರುವಾಗ ಗ್ರಾಮ ಪಂಚಾಯತ್ ಕಾರ್ಯದರ್ಶಿ ರೆಡ್ ಹ್ಯಾಂಡ್ ಆಗಿ ಸಿಕ್ಕು ಬಿದ್ದಿದ್ದಾನೆ.
ಕಲಬುರಗಿ ಜಿಲ್ಲೆಯ ಹಾಗರಗಾ ಗ್ರಾಮ ಪಂಚಾಯತಿ ಕಾರ್ಯದರ್ಶಿ ವೇದಾಂಗ ಎನ್ನುವಾತನೇ ಸರಕಾರ ಕೆಲಸದಲ್ಲಿ ಲಂಚ ಪಡೆಯುತ್ತಿದ್ದಾಗ ಸಿಕ್ಕು ಬಿದ್ದ ಗ್ರಾಮ ಪಂಚಾಯತಿ ಕಾರ್ಯದರ್ಶಿ. ಈತನನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಾವನ ಆಸ್ತಿ ಅತ್ತೆಗೆ ವರ್ಗಾವಣೆ ಮಾಡಲು ಲಂಚಕ್ಕೆ ಬೇಡಿಕೆ ಗ್ರಾಪಂ ಕಾರ್ಯದರ್ಶಿ ಅರೆಸ್ಟ್ | Lokayukta trap in Kalaburagi
ಕಲಬುರಗಿ ಜಿಲ್ಲೆಯ ಹಾಗರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಅಜಾದಪೂರ ಗ್ರಾಮದ ನಿವಾಸಿ ದಸ್ಮಾಬಾಯಿ ಅವರ ಗಂಡ ಹಲವು ವರಗಷಗಳ ಹಿಂದೆ ತೀರಿಕೊಂಡಿದ್ದಾರೆ. ಗಂಡ ಕಿಶನ್ ಪವಾರ್ ಹೆಸರಿನಲ್ಲಿ ಅಜಾದಪೂರ ಗ್ರಾಮದ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಇದೆ. ಗಂಡ ಸತ್ತ ನಂತರ ಈ ಖಾಲಿ ನಿವೇಶನ ತನ್ನ ಹೆಸರಿಗೆ ವರ್ಗಾವಣೆ ಮಾಡುವಂತೆ ಪತ್ನಿ ದಸ್ಮಾಬಾಯಿ ಹಾಗರಗಾ ಪಂಚಾಯತನಲ್ಲಿ ಅರ್ಜಿ ಸಲ್ಲಿಸಿರುತ್ತಾಳೆ.
Read this also : ಮುಧೋಳ ಶಾಸಕನಿಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಕಲಬುರಗಿಯಲ್ಲಿ ಪ್ರತಿಭಟನೆ | Protest in Kalaburagi for Minister seat
ದಸ್ಮಾಬಾಯಿಗೆ ವಯಸ್ಸಾದ ಕಾರಣ ಓಡಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಅರ್ಜಿ ಸಲ್ಲಿಕೆಯ ನಂತರದ ಕೆಲಸದ ಜವಾಬ್ದಾರಿ ಅಳಿಯನಿಗೆ ಒಪ್ಪಿಸಿರುತ್ತಾಳೆ. ಅದೇ ರೀತಿ ನಮ್ಮ ಮಾನವ ಆಸ್ತಿ ಅತ್ತೆಗೆ ವರ್ಗಾವಣೆ ಮಾಡುವಂತೆ ಅರ್ಜಿ ಕೊಟ್ಟು ತಿಂಗಳುಗಳೇ ಕಳೆದಿವೆ. ಆದ್ರೂ ಮಾಡಿಲ್ಲ ಅಂತ ಕಾರ್ಯದರ್ಶಿ ದೇವಾಂಗ ಬಳಿ ಅಳಿಯ ಸಂಜೀವ್ ಹೋಗಿದ್ದಾನೆ.
ಹಣ ಕೊಟ್ಟರೆ ಕೆಲಸ ಎಂದ ಕಾರ್ಯದರ್ಶಿ
ಆಗ ಕಾರ್ಯದರ್ಶಿ ದೇವಾಂಗ್, ಹಣ ಕೊಟ್ಟರೆ ಕೆಲಸ ಆಗುತ್ತೆ ಅಂತ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಬೇಸತ್ತ ಅಳಿಯ ಸಂಜೀವ್, ಲೋಕಾಯುಕ್ತರಿಗೆ ದೂರು ನೀಡಿದ್ದಾನೆ.
ಅದರಂತೆ ಲೋಕಾಯುಕ್ತರು ಕಾರ್ಯಾಚರಣೆಗೆ ಇಳಿದಿದ್ದಾರೆ. ಇತ್ತ ದೇವಾಂಗ , ಕಿಶನ ಪವಾರ ಅವರ ಅಳಿಯ ಸಂಜಿವ್ ನ ಬಳಿ 9950 ರೂಪಾಯಿ ನಗದು ಹಣ ಲಂಚದ ರೂಪದಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಲಂಚಬಾಕ ಕಾರ್ಯದರ್ಶಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
Read this also : ಶಾಸಕ ಅಜಯಸಿಂಗ್ ಗೆ ಒಲಿದ ಮಂತ್ರಿ ಸ್ಥಾನ : ತಾಳ್ಮೆಗೆ ಸಿಕ್ಕ ಜಯ ಎಂದು ಬೆಂಬಲಿಗರ ಹರ್ಷೋದ್ಘಾರ | ಮಗನ ತಬ್ಬಿಕೊಂಡು ಕಂಬನಿ ಮಿಡಿದ ಅಜಯಸಿಂಗ್ ತಾಯಿ | Dr Ajaysingh gets Ministerial berth
ಕಲಬುರಗಿ ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್- ರವಿ. ಪವಾರ್ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಲೋಕಾಯುಕ್ತ ಕಛೇರಿಯ ಅಧಿಕೃತ ಮೂಲಗಳು ತಿಳಿಸಿವೆ.
ಲಂಚಬಾಕ ಅಧಿಕಾರಿಗಳಿಗೆ ಎಚ್ಚರಿಕೆ
ಸರಕಾರಿ ಕೆಲಸ ದೇವರ ಕೆಲಸ ಅಂತ ಮಾಡಬೇಕಾದ ಅಧಿಕಾರಿಗಳು, ಸರಕಾರಿ ಸಂಬಳದ ಜೊತೆಗೆ ಗಿಂಬಳದ ಮೇಲೆ ಆಸೆ ಬಿದ್ದು ಜೈಲು ಸೇರುತ್ತಿದ್ದಾರೆ. ಈ ರೀತಿಯ ಲಂಚಬಾಕ ಅಧಿಕಾರಿಗಳ ಸಾಲಿಗೆ ಹಾಗರಗಿ ಗ್ರಾಮ ಪಂಚಾಯತಿ ಕಾರ್ತದರ್ಶಿ ದೇವಾಂಗ ಸಹ ಸೇರಿದ್ದಾನೆ. ಈ ಪ್ರಕರಣ ಇತರೇ ಸರಕಾರಿ ಅಧಿಕಾರಿಗಳಿಗೆ ಎಚ್ಚರಿಕೆಯಾಗಲಿ. ಲಂಚ ನಿರ್ಮೂಲನೆಯ ಕನಸ್ಸು ನನಸ್ಸಾಗಲಿ..




