ಕಲಬುರಗಿ ಜು.9: ಬಿಸಿಲೂರು ಕಲಬುರಗಿಯಲ್ಲಿ ಇಂದು ನಸುಕಿನಲ್ಲಿ ಲಘು ಪ್ರಕಾಣದ ಭೂಕಂಪನ ಸಂಭವಿಸಿದೆ. ಕಳೆದ ರಾತ್ರಿ ಕಲಬುರಗಿ ನಗರದ ವಿವಿಧೆಡೆ ಜನರಿಗೆ ಭೂಮಿ ಕಂಪಿಸಿದ ಅನುಭವಗಳಾಗಿವೆ.
ತಡರಾತ್ರಿ 1.30 ರ ಸುಮಾರಿಗೆ 4 ರಿಂದ 5 ಸೆಕೆಂಡ್ ಗಳ ಕಾಲ ಭೂಮಿ ಕಂಪನವಾಗಿರುವ ಅನುಭವವಾಗಿದೆ.
ಕಲಬುರಗಿ ನಗರದ ಹರಿಕೃಷ್ಣ ನಗರ, ಮಹಾವೀರ ನಗರ ಸೇರಿದಂತೆ ವಿವಿಧೆಡೆ ಭೂಮಿ ಕಂಪಿಸಿದೆ. ಕಂಪನದ ಅನುಭವವಾದಾಗ ಜನ ಗಾಬರಿಗೊಂಡಿದ್ದು ಭಯ ಭೀತರಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಬಗ್ಗೆ ಜನರಿಂದ ಮಾಹಿತಿ ಲಭ್ಯವಾಗಿದೆ.
ಮನೆಯಲ್ಲಿನ ಪಾತ್ರೆ ಸಾಮಾನುಗಳು, ಅಲಮಾರ ಸೇರಿದಂತೆ ಹಲವು ವಸ್ತುಗಳು ಗಡಗಡ ನಡುಗಿರೋ ಅನುಭವವಾದ ಕಾರಣ ಜನ ಭಯಭೀತರಾಗಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.
ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು





