ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

ಬೆಳೆ ವಿಮೆ ಪರಿಹಾರ ಹಂಚಿಕೆಯಲ್ಲಿ ದೇಶದಲ್ಲೇ ಕಲಬುರಗಿ ಟಾಪ್ 2 | Crop insurance distribution Kalaburagi top 2

August 11, 2026 9:18 AM
Kalaburagi is top 2 in crop insurance distribution
---Advertisement---

ಕಲಬುರಗಿ, ಆ.11: ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಬಿಡುಗಡೆಯಲ್ಲಿ ಕಲಬುರಗಿ ಜಿಲ್ಲೆ ದೇಶದಲ್ಲಿಯೇ 2 ನೇ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಪ್ರೀಯಾಂಕ್ ಖರ್ಗೆ ಹೇಳಿದ್ದಾರೆ. Crop insurance distribution Kalaburagi top 2 . ಈ ಬಾರಿ ಬೆಳೆ ವಿಮೆ ಹಂಚೆಯಲ್ಲಿ ತಾರಮತ್ಯ ಆಗದಂತೆ ತಡೆಯಲು ಪ್ರತ್ಯೇಕ ಪರಿಶೀಲನಾ ಸಮಿತಿ ರಚಿಸಲಾಗುವುದು ಎಂದೂ ಪ್ರೀಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಕಲಬುರಗಿ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ನಿವಾರಣೆಗೆ ಪ್ರತ್ಯೇಕ ಪರಿಶೀಲನಾ ಸಮಿತಿ ರಚಿಸಲಾಗುವುದು. ಈ ಸಮಿತಿಗೆ ಅಧಿಕಾರಿಗಳು ಮತ್ತು ಇತರರನ್ನು ನೇಮಿಸುವಂತೆ ಈಗಾಗಲೆ ಡಿ.ಸಿ. ಅವರಿಗೆ ನಿರ್ದೇಶನ ನೀಡಿದ್ದೇನೆ. ಇನು ಕ್ರಾಪ್ ಕಟ್ಟಿಂಗ್ ಎಕ್ಸಪರಿಮೆಂಟ್ ನಿಖರವಾಗಿ ಅರಿಯಲು ನಿಯಮಾವಳಿಯಲ್ಲಿ ಕೆಲವೊಂದು ಬದಲಾವಣೆ ಸಹ ತರಲಾಗುವುದು ಎಂದರು.

Crop insurance distribution Kalaburagi top 2

ಕಳೆದ ವರ್ಷ ರಾಜ್ಯದಲ್ಲಿ ಮೊದಲನೇ ಸ್ಥಾನ ಮತ್ತು ದೇಶದಲ್ಲಿ ಎರಡನೇ ಸ್ಥಾನದಲ್ಲಿ ಕಲಬುರಗಿ ಜಿಲ್ಲೆಯ ರೈತರು ಬೆಳೆ ವಿಮೆ, ಸರ್ಕಾರದಿಂದ ಇನ್ಪುಟ್ ಸಬ್ಸಿಡಿ ಪಡೆದಿದ್ದಾರೆ. ಕೃಷಿ, ತೋಟಗಾರಿಕೆ, ಕಂದಾಯ ಅಧಿಕಾರಿಗಳ ನಿಖರ ವರದಿ ಮತ್ತು ಗ್ರೌಂಡ್ ಟ್ರುತ್ ವರದಿ ಪರಿಣಾಮ ಇದು ಸಾಧ್ಯವಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕ್ರಾಪ್ ಇನ್ಶೂರೆನ್ಸ್, ಮಿಡ್-ಸೀಸನ್ ಅಡ್ವರ್ಸಿಟಿ ಹಾಗೂ ಇನ್‌ಪುಟ್ ಸಬ್ಸಿಡಿ ಒಳಗೊಂಡಂತೆ ಜಿಲ್ಲೆಯ ರೈತರಿಗೆ ಒಟ್ಟು 3,035 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪರಿಹಾರವನ್ನು ನೀಡಲಾಗಿದೆ ಎಂದರು.

585.72 ಕೋಟಿ ರೂ. ಪರಹಾರ | ಬೆಳೆ ವಿಮೆ ಪರಿಹಾರ ಹಂಚಿಕೆಯಲ್ಲಿ ದೇಶದಲ್ಲೇ ಕಲಬುರಗಿ ಟಾಪ್ 2

ಜಿಲ್ಲೆಯಲ್ಲಿ ಕಳೆದ ವರ್ಷ ದಾಖಲೆ ಪ್ರಮಣದಲ್ಲಿ ಬೆಳೆ ವಿಮೆನಡಿ 585.72 ಕೋಟಿ ರೂ. ಪರಹಾರ ನೀಡಿದರು ಕೆಲವೆಡೆ ಮಧ್ಯಂತರ ಪರಿಹಾರ ಸಿಕ್ಕ ರೈತರಿಗೆ ಅಂತಿಮ ಪರಿಹಾರ ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ಈ ವರ್ಷ ಅದು ಮರುಕಳಿಸದಂತೆ ರೈತರಿಗೆ ನ್ಯಾಯಯುತ ಪರಿಹಾರ ಸಿಗಲು ಎಚ್ಚರ ವಹಿಸಲಾಗುವುದು. ಇನ್ನು ಕಳೆದ ವರ್ಷ ಕೆಲ ರೈತರಿಗೆ ನ್ಯಾಯಯುತ ಪರಿಹಾರ ಸಿಗದಿರುವುದಕ್ಕೆ ಸಂಬಂಧಿಸಿದವರ ಮೇಲೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

5,35,850 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ

ನಮ್ಮ ರೈತರಿಗೆ ಕಷ್ಟಕಾಲದಲ್ಲಿ ಕೈ ಹಿಡಿಯುವ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ಹೆಚ್ಚು ಪ್ರೇರೇಪಿಸಲಾಗುತ್ತಿದೆ. ಈ ಬಾರಿಯ ಸಹ ಮುಂಗಾರು ಹಂಗಾಮಿನಲ್ಲಿ ದಾಖಲೆ ಪ್ರಮಾಣದಲ್ಲಿ 4,58,609ಕ್ಕೂ ಹೆಚ್ಚು ರೈತರು 5,35,850 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಪ್ರಸ್ತುತ ವರ್ಷ ಬೆಳೆ ವಿಮೆ ನೋಂದಾಯಿಸಿಕೊಂಡ ರೈತರಲ್ಲಿ ಹೆಸರು, ಉದ್ದು, ಸೋಯಾಬಿನ್, ತೊಗರಿ ಬೆಳೆದ 37,051 ರೈತರಿಗೆ ಮಧ್ಯಂತರ ಪರಿಹಾರ ನೀಡಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಅನುಮೋದನೆ ದೊರಕಿಸಕೊಡಲಾಗುವುದು ಎಂದರು.

ರೈತರ ಹಿತಕ್ಕಾಗಿ ನಮ್ಮ ಸರ್ಕಾರ ಬದ್ದ

ಕೇಂದ್ರ ಸರ್ಕಾರ ಬರ ಘೋಷಣೆಗೆ 2017ರಲ್ಲಿ ತಿದ್ದುಪಡಿ ಕಠಿಣ ನಿಯಮಾವಳಿಗಳನ್ನು ತಂದ ಪರಿಣಾಮ ನಮ್ಮ ರೈತಾಪಿ ಜನರಿಗೆ ನಾವು ನ್ಯಾಯ ನೀಡಲು ಸಾಧ್ಯವಾಗುತ್ತಿಲ್ಲ. ನಿಯಮಾವಳಿ ಸರಳೀಕರಣಗೊಳಿಸುವಂತೆ ಈಗಾಗಲೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಕಳೆದ ಬಾರಿ ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ವಿಳಂಬ ಧೋರಣೆ ನಡೆಸಿದ್ದರಿಂದ ಸುಪ್ರೀಂ ಕೋರ್ಟ್ಗೆ ಹೋಗಿ ನಮ್ಮ ರೈತರಿಗೆ ಪರಿಹಾರ ಕೊಡಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದ ಅವರು, ರೈತರ ಹಿತಕ್ಕಾಗಿ ನಮ್ಮ ಸರ್ಕಾರ ಬದ್ದವಾಗಿದೆ ಎಂದರು.

ಪರಿಹಾರಕ್ಕೆ ಪ್ರಧಾನಿಗೆ ಮನವಿ

ಪ್ರಸ್ತುತ ಸೂಪರ್ ಎಲ್ನಿನೋ ಬಗ್ಗೆಯೂ ಗಮನಹರಿಸಿ ನೆರವು ನೀಡುವಂತೆ ಈಗಾಗಲೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಮತ್ತು ಕೇಂದ್ರದ ಗೃಹ ಸಚಿವರ ಗಮನ ಸೆಳೆದಿದ್ದು, ಯಾವ ರೀತಿಯ ಸ್ಪಂದನೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಬರ ಘೋಷಣೆ ಕೇಂದ್ರದ ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ಮಾಡಬೇಕಿರುವುದರಿಂದ ಅರ್ಹತಾ ಷರತ್ತು ಪೂರೈಸದ ಹೊರತು ಘೋಷಣೆ ಕಷ್ಟಸಾಧ್ಯ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

WhatsApp

Join Now

Telegram

Join Now

Leave a Comment