ಅಜಯಸಿಂಗ್ ಗೆ ಮಂತ್ರಿಸ್ಥಾನ: ಯೋಗೇಶ ಉಮ್ಮರಗಿ ಸಂಭ್ರಮ| Ajay Singh’s ministerial seat Yogesh Umaragi Celebrate
ಕಲಬುರಗಿ ಆ.೩: ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದಕ್ಕೆ ಜೇವರ್ಗಿ ಹಾಗೂ ಕಲಬುರಗಿಯಲ್ಲಿ ವ್ಯಾಪಕ ಸಂಭ್ರಮ ವ್ಯಕ್ತವಾಗುತ್ತಿದೆ.
ಡಾ. ಅಜಯಸಿಂಗ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದಕ್ಕೆ ಕಾಂಗ್ರೆಸ್ ಪಕ್ಷದ ಕಲಬುರಗಿ ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಉಪಾಧ್ಯಕ್ಷ ಯೋಗೇಶ ಉಮ್ಮರಗಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜಕೀಯದಲ್ಲಿ ಸಣ್ಣ ಕಪ್ಪು ಚುಕ್ಕೆಯೂ ಇಲ್ಲದಂತೆ ರಾಜಕೀಯ ಮಾಡಿದವರು ಮಾಜಿ ಸಿಎಂ ದಿವಂಗತ ಧರ್ಮಸಿಂಗ್ ಅವರು. ಅವರ ಪುತ್ರರಾಗಿ ಡಾ. ಅಜಯಸಿಂಗ್ ಅವರೂ ಸಹ ಧರ್ಮಸಿಂಗ್ ಅವರಂತೆ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ, ಸದಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಸಿಕ್ಕಿರುವುದು ಜೇವರ್ಗಿ ಮಾತ್ರವಲ್ಲ, ಕಲಬುರಗಿ ಹಾಗೂ ರಾಜ್ಯದ ಜನರಿಗೆ ಸಂತಸ ಮೂಡಿಸಿದೆ. ಯಾವುದೇ ಮಂತ್ರಿ ಸ್ಥಾನ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಡಾ. ಅಜಯಸಿಂಗ್ ಅವರಿಗೆ ಇದೆ ಎಂದು ಯೋಗೇಶ ಉಮ್ಮರಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಅಜಯಸಿಂಗ್ ಅವರಿಗೆ ಯಾವತ್ತೋ ಮಂತ್ರಿ ಸ್ಥಾನ ಸಿಗಬೇಕಿತ್ತು. ತಡವಾಗಿಯಾದರೂ ಮಂತ್ರಿ ಸ್ಥಾನ ಸಿಕ್ಕಿರುವುದು ಸಂತಸ ತಂದಿದೆ ಎಂದು ಯೋಗೇಶ ಉಮ್ಮರಗಿ ಹರ್ಷ ವ್ಯಕ್ತಪಡಿಸಿದ್ದಾರೆ.
ತಾಳ್ಮೆಗೆ ಸಿಕ್ಕ ಜಯ ಎಂದ ಬೆಂಬಲಿಗರು
ಹಾಗೆ ನೋಡಿದರೆ ಅಜಯಸಿಂಗ್ ಅವರಿಗೆ ಯಾವತ್ತೋ ಮಂತ್ರಿ ಸ್ಥಾನ ಸಿಗಬೇಕಿತ್ತು. ಸಿದ್ರಾಮಯ್ಯ ಸಂಪುಟದಲ್ಲೇ ಅಜಯಸಿಂಗ್ ಮಂತ್ರಿಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮಂತ್ರಿ ಸ್ಥಾನ ಕೈ ತಪ್ಪುತ್ತಲೇ ಇತ್ತು. ಆದರೂ ಕಿಂಚಿತ್ತೂ ಅಪಸ್ವರ ಎತ್ತದಿವರಲ್ಲ ಡಾ. ಅಜಯಸಿಂಗ್. ಮುಂದಿನ ದಿನಗಳಲ್ಲಿ ನನಗೆ ಮಂತ್ರಿ ಸ್ಥಾನ ಸಿಗುತ್ತೆ. ನಮ್ಮ ನಾಯಕರು ಅವಕಾಶ ಮಾಡಿ ಕೊಡ್ತಾರೆ. ಜೀವನದಲ್ಲಿ ತಾಳ್ಮೆ ಮುಖ್ಯ. ನಿಧಾನವಾಗಿ ಆದ್ರೂ ಗಟ್ಟಿಯಾಗಿ ಬೆಳೆಯಬೇಕು ಎನ್ನುವ ಮಾತು ಪದೇ ಪದೇ ಹೇಳುತ್ತಿದ್ದರು. ಇದನ್ನು ಅಜಯಸಿಂಗ್ ಅವರ ಬಾಯಿಯಿಂದ ಹತ್ತಾರು ಬಾರಿ ಕೇಳಿದ್ದ ಅವರ ಬೆಂಬಲಿಗರು, ಈಗ ಅಜಯಸಿಂಗ್ ಅವರ ತಾಳ್ಮೆಗೆ ಜಯ ಸಿಕ್ಕಿದೆ. ಈ ಮಂತ್ರಿ ಸ್ಥಾನ ಅವರ ತಾಳ್ಮೆಗೆ ಸಿಕ್ಕ ಜಯ ಎನ್ನುತ್ತಿದ್ದಾರೆ.
ಜೇವರ್ಗಿ , ಕಲಬುರಗಿ ಸಂಭ್ರಮ
ಅಜಯಸಿಂಗ್ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಸಿಕ್ಕಿದ್ದಕ್ಕಾಗಿ ಕಲಬುರಗಿ, ಜೇವರ್ಗಿಯಲ್ಲಿ ಅಭಿಮಾನಿಗಳಲ್ಲಿ ಸಂತಸ, ಹರ್ಷೋದ್ಘಾರ ಮುಗಿಲು ಮುಟ್ಟಿದೆ.




